ಇಂಡೋನೇಷ್ಯಾ : ಇಂಡೋನೇಷ್ಯಾದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಸುಮಾರು 6 ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ.
ಇಂಡೋನೇಷ್ಯಾದ ಕೇಪುಲೌನ್ ಬರತ್ ದಯಾ ಎಂಬಲ್ಲಿ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 6 ತೀವ್ರತೆ ದಾಖಲಾಗಿದೆ.
ಭೂಕಂಪನ ಭೂಮಿಯಿಂದ 127 ಕಿಮೀ ಆಳದಲ್ಲಿ ಆಗಿದೆ. ಭೂಕಂಪದ ತೀವ್ರತೆ 6.4ರಷ್ಟಿತ್ತು ಎಂದು ಮೊದಲು ವರದಿಯಾಗಿತ್ತು. ಆದರೆ ಅದನ್ನು ಇಎಂಎಸ್ಸಿ ಮತ್ತೊಮ್ಮೆ ಪರಿಷ್ಕರಿಸಿದ ಬಳಿಕ 6ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿಸಿದೆ.