News Karnataka Kannada
Monday, April 29 2024
ವಿದೇಶ

ಆನ್‌ಲೈನ್ ಗೇಮ್: ತಾಯಿ, ಅಣ್ಣ ಮತ್ತು ಇಬ್ಬರು ಸಹೋದರಿಯರನ್ನು ಗುಂಡಿಕ್ಕಿ ಕೊಂದ ಬಾಲಕ

Game
Photo Credit : IANS

ಲಾಹೋರ್ : ಭಾರತದಲ್ಲಿ ಆನ್‌ಲೈನ್ ಗೇಮ್ ಪಬ್​ಜಿ ಬ್ಯಾನ್‌ ಮಾಡಲಾಗಿದೆ. ಈ ಆಟದಿಂದ ಎಷ್ಟೋ ಮಕ್ಕಳು ಜೀವ ಕಳೆದುಕೊಂಡಿರುವುದನ್ನು ಗಮನಿಸಿ ನಮ್ಮ ಸರ್ಕಾರ ಈ ಒಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಆದರೆ ಪಾಕಿಸ್ತಾನದ ಸೇರಿದಂತೆ ಕೆಲವು ದೇಶಗಳಲ್ಲಿ ಈ ಆಟ ಇನ್ನೂ ಚಾಲ್ತಿಯಲ್ಲಿದೆ.

ಇದೀಗ ಇನ್ನೊಂದು ಭಯಾನಕ ಎನಿಸುವ ಕೃತ್ಯವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯಲ್ಲಿ ನಡೆದಿದೆ. ಈ ಆಟದ ಹುಚ್ಚಿಗೆ ಬಲಿಯಾಗಿರುವ 14 ವರ್ಷದ ಬಾಲಕನೊಬ್ಬ ತನ್ನ ತಾಯಿ, ಅಣ್ಣ ಮತ್ತು ಇಬ್ಬರು ಅಪ್ರಾಪ್ತ ಸಹೋದರಿಯರು ಸೇರಿದಂತೆ ಇಡೀ ಕುಟುಂಬವನ್ನು ಗುಂಡಿಕ್ಕಿ ಕೊಂದಿದ್ದಾನೆ!

ಲಾಹೋರ್‌ನ ಕಹ್ನಾ ಪ್ರದೇಶದಲ್ಲಿ 45 ವರ್ಷದ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್, ಇವರ 22 ವರ್ಷದ ಮಗ ತೈಮೂರ್ ಮತ್ತು 17 ಮತ್ತು 11 ವರ್ಷದ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದರು. ಇದರ ತನಿಖೆಯ ವೇಳೆ ಈ ಭಯಾನಕ ಅಂಶ ಬೆಳಕಿಗೆ ಬಂದಿದೆ. 14 ವರ್ಷದ ಬಾಲಕನೊಬ್ಬನೇ ಹೇಗೆ ಬದುಕುಳಿದ ಎನ್ನುವ ಸಂದೇಹದ ಮೇರೆಗೆ ಆತನನ್ನು ವಿಚಾರಿಸಿದಾಗ ಈತನ ಪಬ್‌ಜಿ ವ್ಯಾಮೋಹ ಬೆಳಕಿಗೆ ಬಂದಿದೆ. ದಿನದ ಹೆಚ್ಚಿನ ಸಮಯವನ್ನು ಆನ್‌ಲೈನ್ ಆಟವಾಡುತ್ತಾ ಕಳೆಯುವುದರಿಂದ ಆತ ಮಾನಸಿಕ ಸಮಸ್ಯೆಗೆ ಒಳಗಾಗಿದ್ದ. ಆಟದಲ್ಲಿ ಕೊಟ್ಟಿರುವ ಚಾಲೆಂಜ್‌ಗಳನ್ನು ಸ್ವೀಕರಿಸುತ್ತಾ ಎಲ್ಲರನ್ನೂ ಕೊಂದುಹಾಕಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿದೆ.

ನಹೀದ್ ವಿಚ್ಛೇದಿತೆಯಾಗಿದ್ದು, ಮಗ ಬರೀ ಆಟವಾಡುತ್ತಿದ್ದ ಎಂದು ಬುದ್ಧಿಮಾತು ಹೇಳುತ್ತಿದ್ದರು. ಇದರಿಂದ ತಾಯಿಯ ಬಗ್ಗೆ ಆತ ಬಹಳ ಸಿಟ್ಟುಗೊಂಡಿದ್ದ. ನಂತರ ಅದರಂತೆಯೇ ಪಬ್‌ಜಿ ಗೇಮ್‌ನಲ್ಲಿ ಕೆಲವೊಂದು ಚಾಲೆಂಜ್‌ಗಳು ಇದ್ದವು. ಅದರ ಅನ್ವಯ ಮೊದಲು ಕಬೋರ್ಡ್‌ನಲ್ಲಿದ್ದ ಪಿಸ್ತೂಲ್‌ ತೆಗೆದು ಆಕೆಯ ಕೊಲೆ ಮಾಡಿದ್ದ. ಇದಾದ ಮೇಲೆ ಮಲಗಿದ್ದ ಇಬ್ಬರು ಸೋದರಿಯರನ್ನು ಹಾಗೂ ಒಬ್ಬ ಅಣ್ಣನನ್ನು ಅದೇ ಪಿಸ್ತೂಲ್‌ನಿಂದ ಕೊಂದಿದ್ದಾನೆ.

ಲಾಹೋರ್‌ನಲ್ಲಿ ಆನ್‌ಲೈನ್ ಆಟಕ್ಕೆ ಸಂಬಂಧಿಸಿದಂತೆ ಇದು ನಾಲ್ಕನೇ ಅಪರಾಧವಾಗಿದೆ ಎಂದು ಸ್ಥಳೀಯ ಡಾನ್‌ ಪತ್ರಿಕೆ ವರದಿ ಮಾಡಿದೆ. 2020 ರಲ್ಲಿಯೇ ಈ ಆಟದ ಭಯಾನಕತೆ ಗಮನಿಸಿದ್ದ ಅಂದಿನ ಪೊಲೀಸ್ ಅಧಿಕಾರಿ ಜುಲ್ಫಿಕರ್ ಹಮೀದ್ ಈ ಆಟವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದ್ದರು. ಆದರೆ ಅದಿನ್ನೂ ಬ್ಯಾನ್‌ ಆಗಲಿಲ್ಲ. ಸರ್ಕಾರ ಇನ್ನೂ ಮನಸ್ಸು ಮಾಡಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು