News Karnataka Kannada
Saturday, April 27 2024
ವಿದೇಶ

ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ

Fire
Photo Credit :

ಫಿಲಿಡೆಲ್ಫಿಯಾ: ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಕಟ್ಟಡದಲ್ಲಿ ನಾಲ್ಕು ಸ್ಮೋಕ್ ಡಿಟೆಕ್ಟರ್‌ಗಳಿದ್ದರೂ, ಅವು ವಿಫಲಗೊಂಡ ಕಾರಣ ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ.

ಸಾರ್ವಜನಿಕ ವಸತಿ ಪ್ರಾಧಿಕಾರ ಒಡೆತನದ ನಗರದ ಫೇರ್‌ಮೌಂಟ್ ಪರಿಸರದಲ್ಲಿದ್ದ ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಅವಘಡ ನಡೆದಿದ್ದು, ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು 50 ನಿಮಿಷ ಬೇಕಾಯಿತು. ಆದರೆ ಕಟ್ಟಡದಲ್ಲಿ ನಾಲ್ಕು ಸ್ಮೋಕ್ ಡಿಟೆಕ್ಟರ್‌ಗಳಿದ್ದರೂ, ಅವು ವಿಫಲಗೊಂಡ ಕಾರಣ ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿ ಶಾಮಕ ದಳ ತಿಳಿಸಿದೆ ಈ ಕ್ರಮದಲ್ಲಿ ಏಳು ಮಕ್ಕಳು ಸೇರಿದಂತೆ ಎಂಟು ಜನರು ಎರಡು ನಿರ್ಗಮನ ಮಾರ್ಗಗಳ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಫಿಲಡೆಲ್ಫಿಯಾ ಉಪ ಅಗ್ನಿಶಾಮಕ ಆಯುಕ್ತ ಕ್ರೇಗ್ ಮರ್ಫಿ ಹೇಳಿದ್ದಾರೆ.

 

ಈವರೆಗೆ ತಾವು ನೋಡಿದ ಅತ್ಯಂತ ಭಯಾನಕ ಅಗ್ನಿ ಅವಘಡವಾಗಿದೆ ಮೇಯರ್ ಜಿಮ್ ಕೆನ್ನಿ ಹೇಳಿದ್ದಾರೆ. ಕಟ್ಟಡವನ್ನು ಎರಡು ಕುಟುಂಬಗಳಿಗೆ ಅನುಕೂಲವಾಗುವಂತೆ ಪರಿವರ್ತಿಸಲಾಗಿದ್ದು, ಸುಮಾರು 26 ಮಂದಿ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಗ್ನಿಶಾಮಕ ಆಯುಕ್ತ ಕ್ರೇಗ್ ಮರ್ಫಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು