ಕಾಬೂಲ್ : ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ಆಡಳಿತ ನಡೆಸುತ್ತಿರುವ ತಾಲಿಬಾನ್ ಇದೀಗ ಮತ್ತೊಂದು ಘೋಷಣೆ ಮಾಡಿದ್ದು, ಅಫ್ಘಾನಿಸ್ತಾನದಲ್ಲಿ ವಿದೇಶೀ ಕರೆನ್ಸಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾಗಿ ಇಂದು ತಾಲಿಬಾನ್ ಘೋಷಣೆ ಮಾಡಿದೆ.
ಅಫ್ಘಾನ್ನದರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ದೇಶದ ಜನರು ತಮ್ಮ ನಿತ್ಯದ ಪ್ರತಿ ವ್ಯವಹಾರದಲ್ಲಿಯೂ ಅಫ್ಘಾನಿಸ್ತಾನದ ಕರೆನ್ಸಿಯನ್ನೇ ಬಳಸಬೇಕು ಎಂಬ ನಿರ್ಣಯ ಜಾರಿ ಮಾಡಲಾಗಿದ್ದು, ವಿದೇಶೀ ಕರೆನ್ಸಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನಿನ್ನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಮಿಲಿಟರಿ ಆಸ್ಪತ್ರೆಯ ಬಳಿ ಎರಡು ಸ್ಫೋಟಗಳು ಸಂಭವಿಸಿ 19 ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.