ಪ್ಯೊಂಗ್ಯಾಂಗ್: ಉತ್ತರ ಕೊರಿಯಾವು ತನ್ನ ಶತ್ರುಗಳ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಮತ್ತೊಮ್ಮೆ ಬೆದರಿಕೆ ಹಾಕಿದೆ. ದಕ್ಷಿಣ ಕೊರಿಯಾ ಮತ್ತು ಅದರ ಮಿತ್ರರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ಪ್ಯೊಂಗ್ಯಾಂಗ್ ಮೇಲೆ ದಾಳಿ ಮಾಡಿದರೆ ತನ್ನ ಮಿಲಿಟರಿಯು ಯಾವುದೇ ಹಿಂಜರಿಕೆಯಿಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ.

ಕಿಮ್ ಅವರು ಇತ್ತೀಚೆಗೆ ಪಯೋಂಗ್ಯಾಂಗ್‌ನ ಪಶ್ಚಿಮಕ್ಕೆ ವಿಶೇಷ ಪಡೆಗಳ ಮಿಲಿಟರಿ ತರಬೇತಿ ನೆಲೆಯನ್ನು ಪರಿಶೀಲಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಮಾತನಾಡಿದರು. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಪೀಪಲ್ಸ್ ಕೊರಿಯಾದ (ಡಿಆರ್‌ಪಿಕೆ) ಸಾರ್ವಭೌಮತ್ವದ ಮೇಲೆ ದಾಳಿ ಮಾಡಲು ಶತ್ರುಗಳು ಸಶಸ್ತ್ರ ಪಡೆಗಳನ್ನು ಬಳಸಲು ಪ್ರಯತ್ನಿಸಿದರೆ, ಡಿಪಿಆರ್‌ಕೆ ಯಾವುದೇ ಪ್ರತೀಕಾರವಿಲ್ಲದೆ ಪ್ರತಿಕ್ರಿಯಿಸುತ್ತದೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯಿಂದ ನಾವು ಹಿಂದೆ ಸರಿಯುವುದಿಲ್ಲ ಎಂಬುದಾಗಿ ಎಚ್ಚರಿಕೆಯನ್ನು ರವಾನಿಸಿದರು.

ದಕ್ಷಿಣ ಕೊರಿಯಾದ ಅಧ್ಯಕ್ಷರು ಹೇಳಿದ್ದೇನು..?: ಈ ವಾರದ ಆರಂಭದಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್ ಅವರು ಪ್ಯೊಂಗ್ಯಾಂಗ್ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದರೆ ಉತ್ತರ ಕೊರಿಯಾದ ಆಡಳಿತವನ್ನು ನಾಶಪಡಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು. ಈ ಬೆನ್ನಲ್ಲೇ ಕಿಮ್‌ ಈ ಎಚ್ಚರಿಕೆಯನ್ನು ರವಾನಿಸಿದ್ದಾರೆ.