ಅಮೇರಿಕಾ: ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಮೆರಿಕಾದ ಫೀನಿಕ್ಸ್ ನಗರದಲ್ಲಿ ಸ್ಥಾಪಿಸಿರುವ ವೆಂಕಟೇಶ್ವರ ದೇವರಿಗೆ ಭಕ್ತೆ ಅನಿಲಾ ದಂಪತಿಗಳು 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರಖಚಿತ ಸ್ವರ್ಣ ಕಿರೀಟವನ್ನು ಪುತ್ತಿಗೆ ಶ್ರೀಪಾದರಿಗೆ ಇಂದು ಅರ್ಪಿಸಿದರು.
ಈ ಅಮೂಲ್ಯ ದುಬಾರಿಯ ಕಿರೀಟ 2023ರ ಜನವರಿ 1ರಂದು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಕಿರಣಾಚಾರ್ಯ, ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು .