ಅಮೆರಿಕದ ಮಿಚಿಗನ್ ರಾಜ್ಯದ ಅತಿದೊಡ್ಡ ನಗರವಾದ ಡೆಟ್ರಾಯಿಟ್ ಬಳಿಯ ವಾಟರ್ಪಾರ್ಕ್ನಲ್ಲಿ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ. ರೋಷೆಸ್ಟರ್ ಹಿಲ್ಸ್ನ ಚಿಲ್ಡ್ರನ್ ವಾಟರ್ ಪಾ್ಕ್ನಲ್ಲಿ ಈ ದಾಳಿ ನಡೆದಿದೆ.
ಓಕ್ಲ್ಯಾಂಡ್ ಕೌಂಟಿಯಲ್ಲಿ ಆರೋಪಿ ಗುಂಡಿನ ದಾಳಿಯ ನಂತರ ಹತ್ತಿರದ ಮನೆಯೊಂದರಲ್ಲಿ ಅಡಗಿಕುಳಿತಿದ್ದ. ಪೊಲೀಸರು ಮನೆಯನ್ನು ಸುತ್ತುವರೆದು ಒಳಗೆ ಪ್ರವೇಶಿಸಿದಾಗ ಶಂಕಿತ ವ್ಯಕ್ತಿಯ ಶವ ಅಲ್ಲಿ ಇತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ.
ಶನಿವಾರ ಸಂಜೆ 5ಗಂಟೆ ವೇಳೆಗೆ ರೋಚೆಸ್ಟರ್ ಹಿಲ್ಸ್ನ ಆಬರ್ನ್ ಸ್ಪ್ಲಾಶ್ ಪ್ಯಾಡ್ಗೆ ಆಗಮಿಸಿದ್ದ ಆರೋಪಿ ತನ್ನ ವಾಹನದಿಂದ ಇಳಿದು ಗುಂಡು ಹಾರಿಸಲು ಶುರು ಮಾಡಿದ್ದ, 9 ಎಂಎಂ ಸೆಮಿ ಆಟೋಮ್ಯಾಟಿಕ್ ಗ್ಲಾಕ್ನಿಂದ 28 ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಬಂದೂಕು ಹಾಗೂ ಮೂರು ಖಾಲಿ ಮ್ಯಾಗಜೀನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂದೂಕಿನಿಂದ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗಿದೆ.