ಕದನ ವಿರಾಮದ ಪರಿಸ್ಥಿತಿಗಳು ಮತ್ತು ಮುಂಬರುವ ಮಾತುಕತೆಗಳ ಕುರಿತು ಇರಾನ್ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇದು ಅಮೆರಿಕಾ-ಇಸ್ರೇಲ್ ವಿರುದ್ಧ ನಮಗೆ ಸಿಕ್ಕ ದೊಡ್ಡ ವಿಜಯ ಎಂದು ಹೇಳಿಕೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಮಿಲಿಟರಿ ದಾಳಿಗಳಿಗೆ ಎರಡು ವಾರಗಳ ವಿರಾಮ ಘೋಷಿಸಿದ್ದಾರೆ, ಮಾತುಕತೆಗಳು ವೇಗ ಪಡೆಯುತ್ತಿದ್ದಂತೆ ಇದನ್ನು ‘ದ್ವಿಪಕ್ಷೀಯ ಕದನ ವಿರಾಮ’ ಎಂದು ಬಣ್ಣಿಸಿದ್ದಾರೆ.
ವಾಷಿಂಗ್ಟನ್ ಒಪ್ಪಂದದತ್ತ ಪ್ರಗತಿಯನ್ನು ಸೂಚಿಸುತ್ತಿದ್ದರೆ, ಇರಾನ್ ಸ್ಟೇಟ್ ಟಿವಿ ಇದು ‘ಅವಮಾನಕರ ಹಿಮ್ಮೆಟ್ಟುವಿಕೆ’ ಎಂದು ಹೇಳಿಕೊಂಡಿದೆ, ಅಮೆರಿಕ ಟೆಹ್ರಾನ್‌ನ ಷರತ್ತುಗಳನ್ನು ಒಪ್ಪಿಕೊಂಡಿದೆ ಎಂದು ಆರೋಪಿಸಿದೆ. ಆ ಹೇಳಿಕೆಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ, ಮತ್ತು ಪರಿಸ್ಥಿತಿ ಅಸ್ಥಿರವಾಗಿಯೇ ಉಳಿದಿದೆ.

