News Karnataka Kannada
Friday, May 03 2024
ವಿದೇಶ

ವಿಜ್ಞಾನ ಜಗತ್ತಿಗೆ ಅಚ್ಚರಿ ತಂದ ಸಂಗತಿ : ನಾಲ್ಕು ಕಾಲಲ್ಲಿ ನಡೆಯುತ್ತೆ ಈ ಕುಟುಂಬ

ವಿಜ್ಞಾನವೇ ಸತ್ಯ ಎಂದು ನಂಬಿರುವ ನಮಗೆ ಅಚ್ಚರಿ ತರುವ ಸಂಗತಿ ಒಂದು ಟರ್ಕಿಯ ಕುಟುಂಬ ದಲ್ಲಿ ನಡೆದಿದೆ ಏನಿದು ಅಚ್ಚರಿ ಅಂತೀರಾ , ಸಾಮನ್ಯವಾಗಿ ಮಾನವ ಎರಡು ಕಾಲುಗಳಲ್ಲಿ ನಡೆಯುತ್ತಾನೆ ಆದರೆ ಈ ಕುಟುಂಬದ ಸದಸ್ಯರು ತಮ್ಮ ಕೈ ಗಳನ್ನು ಸಹ ಉಪಯೋಗಿಸಿ ನೆಲಕ್ಕೆ ಕೈಯನ್ನು ಊರಿ ನಡೆಯುತ್ತಾರೆ.
Photo Credit : NewsKarnataka

ವಿಜ್ಞಾನವೇ ಸಂಗತಿಗಳನ್ನೆ ಸತ್ಯ ಎಂದು ನಂಬಿರುವ ನಮಗೆ ಅಚ್ಚರಿ ತರುವ ಸಂಗತಿ ಒಂದು ಟರ್ಕಿಯ ಕುಟುಂಬ ದಲ್ಲಿ ನಡೆದಿದೆ ಏನಿದು ಅಚ್ಚರಿ ಅಂತೀರಾ , ಸಾಮನ್ಯವಾಗಿ ಮಾನವ ಎರಡು ಕಾಲುಗಳಲ್ಲಿ ನಡೆಯುತ್ತಾನೆ ಆದರೆ ಈ ಕುಟುಂಬದ ಸದಸ್ಯರು ತಮ್ಮ ಕೈ ಗಳನ್ನು ಸಹ ಉಪಯೋಗಿಸಿ ನೆಲಕ್ಕೆ ಕೈಯನ್ನು ಊರಿ ನಡೆಯುತ್ತಾರೆ.

ಮಂಗನಿಂದ ಮಾನವ ಎಂದು ಈಗಾಲೇ ಎಲ್ಲರೂ ತಿಳಿದಿರುವ ವಿಚಾರ ಮೊದಲು ಕೋತಿ ತಮ್ಮ ನಾಲ್ಕು ಕಾಲುಗಳಲ್ಲಿ ನಡೆಯುತ್ತವೆ ಮುಂದೆ ಮಾನವನಾಗಿ ಬದಲಾಗಿ ಎರಡು ಕಾಲು ಗಳಲ್ಲಿ ನಡೆಯುತ್ತೇವೆ. ಆದರೆ ಆ ಇಡೀ ಕುಟುಂಬದಲ್ಲಿ ಎಲ್ಲರೂ ಬೆನ್ನು ಬಗ್ಗಿಸಿ, ಕೈಗಳನ್ನು ನೆಲಕ್ಕೆ ಊರಿಕೊಂಡೇ ನಡೆಯುತ್ತಾರೆ. ಈ ವಿಚಿತ್ರ ಜಗತ್ತಿನ ವಿಜ್ಞಾನಿಗಳಿಗೂ ದೊಡ್ಡ ಸವಾಲಾಗಿದೆ.

2 ಕೈಗಳು ಮತ್ತು 2 ಕಾಲುಗಳಿಂದ ನಡೆಯುವ ಟರ್ಕಿಯ ಉಲಾಸ್ ಕುಟುಂಬದ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದಾರೆ. “ದಿ ಫ್ಯಾಮಿಲಿ ದಟ್ ವಾಕ್ಸ್ ಆನ್ ಆಲ್ ಫೋರ್ಸ್” ಎಂಬ ಈ ಸಾಕ್ಷ್ಯಚಿತ್ರದಲ್ಲಿ ಆ ಇಡೀ ಕುಟುಂಬದ ಕತೆ ಹಾಗೂ ಅವರ ಜೀವನವನ್ನು ದಾಖಲಿಸಲಾಗಿದೆ. ಇದು ವೈಜ್ಞಾನಿಕ ಪ್ರಪಂಚವನ್ನೇ ದಿಗ್ಭ್ರಮೆಗೊಳಿಸಿದೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವಿಕಸನೀಯ ಮನಶ್ಶಾಸ್ತ್ರಜ್ಞ ಪ್ರೊಫೆಸರ್ ನಿಕೋಲಸ್ ಹಂಫ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಉಲಾಸ್ ಕುಟುಂಬ ಇನ್ನೂ ಪ್ರಾಣಿಗಳಂತೆ ಕೈ-ಕಾಲುಗಳನ್ನು ಬಳಸಿ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ, ಆ ಕುಟುಂಬದ 18 ಮಕ್ಕಳಲ್ಲಿ 6 ಮಕ್ಕಳಿಗೆ ಹುಟ್ಟುವಾಗಲೇ ಒಂದೇ ರೀತಿಯ ನ್ಯೂನತೆ ಕಾಣಿಸಿಕೊಂಡಿದೆ. ಅವರ್ಯಾರಿಗೂ ನೇರವಾಗಿ ನಿಲ್ಲಲು ಸಾಧ್ಯವೇ ಆಗುವುದಿಲ್ಲ. ಅವರು ಕೈ ಕಾಲುಗಳನ್ನು ಬಳಸಿ ನೆಲದ ಮೇಲೆ ಬಗ್ಗಿಕೊಂಡೇ ನಡೆಯುತ್ತಾರೆ ಎಂದು ತಿಳಿಸಿದ್ದಾರೆ.

ಇದೀಗ ಈ ಅಚ್ಚರಿ ಸಂಗತಿ ಎಲ್ಲರನ್ನು ತಬ್ಬಿಬಾಗಿಸಿದೆ.. ಈ ರೀತಿ 2 ಕೈಗಳು ಮತ್ತು 2 ಕಾಲುಗಳ ಮೇಲೆ ನಡೆಯುವ ವ್ಯಕ್ತಿಗಳು ಸಣ್ಣ ಸೆರೆಬೆಲ್ಲಮ್ ಅನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆದರೆ, ಈ ಸೆರೆಬೆಲ್ಲಮ್ ಗಾತ್ರವನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳು ಇದೇ ರೀತಿ ಬಾಗಿಕೊಂಡು ನಡೆಯುತ್ತಾರೆಂದು ಹೇಳಲು ಸಾಧ್ಯವಿಲ್ಲ. ಅಲ್ಲದೇ ಇವರ ಅಸ್ತಿಪಂಜರ ಕೂಡ ಕೋತಿಗಳ ಅಸ್ತಿಪಂಜರಕ್ಕೆ ಹೋಲುತ್ತದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು