ಅಬುಧಾಬಿ : ಅಮೇರಿಕ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಯುದ್ದದಿಂದ ಪ್ರತೀಕಾರವಾಗಿ ಇರಾನ್ ದೇಶವು ಸಂಯುಕ್ತ ಅರಬ್ ಸಂಸ್ಥಾನ ಸೇರಿ ಹಲವು ಗಲ್ಫ್ ದೇಶಗಳಲ್ಲಿರುವ ಅಮೇರಿಕದ ಸೇನಾ ನೆಲೆ ಹಾಗೂ ಅಮೆರಿಕಾಗೆ ಸೇರಿದ ಸ್ವತ್ತುಗಳನ್ನು ಆಕ್ರಮಣ ಮಾಡಲು ಪ್ರಾರಂಭಿಸಿ ದಾಳಿಯನ್ನುಇರಾನ್ ದೇಶ ಇಂದಿಗೂ ಮುಂದುವರಿಸುತ್ತಿದೆ, ದುಬೈ ಪ್ರವಾಸಕ್ಕೆ ಎಂದು ಆಗಮಿಸಿ ಈ ಯುದ್ಧ ಭೀತಿಯ ಸಮಯದಲ್ಲಿ ವಿಮಾನ ಸೇವೆ ನಿಂತು ತಾಯಿನಾಡು ಭಾರತಕ್ಕೆ ತೆರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಹಲವು ಪ್ರವಾಸಿ ಕನ್ನಡಿಗರಿಗೆ ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ಸಹಾಯ ಮಾಡಲಾಯಿತು.

ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗದ ಮುಖ್ಯಸ್ಥರಾದ ರಫೀಕಲಿ ಕೊಡಗು ಹಾಗೂ ಸದಸ್ಯರಾದ ಅಯೂಬ್ ಶಿವಮೊಗ್ಗ ಮತ್ತು ನೌಫಲ್ ಮಂಗಳೂರು ಅವರು ಯುದ್ಧ ಭೂಮಿಯಲ್ಲಿ ಕಂಗಾಲಾಗಿದ್ದ ಪ್ರವಾಸಿ ಕನ್ನಡಿಗರನ್ನು ಭೇಟಿಯಾಗಿ ಸಾಂತ್ವನ ಹೇಳುವ ಮೂಲಕ ಧೈರ್ಯ ತುಂಬಿದರು. ಹಾಗೆ ಹೆಮ್ಮಯ ದುಬೈ ಕನ್ನಡ ಸಂಘದ ಕೋರಿಕೆ ಮೇರೆಗೆ ಸಂಕಷ್ಟದಲ್ಲಿದ್ದ ಪ್ರವಾಸಿ ಕನ್ನಡಿಗರಿಗೆ ಉಳಿಯಲು ಹೋಟೆಲ್ ವ್ಯವಸ್ಥೆಯನ್ನು ಡ್ರೀಮ್ ಸಿಟಿ ಹೋಟೆಲ್ ಮಾಲೀಕರಾದ ಕಿರಣ್ ಗೌಡ ಹಾಗೂ ರಾಯಲ್ ತುಲಿಪ್ ತಮರ್ ಇನ್ ಹೋಟೆಲ್ ಮಾಲೀಕರಾದ ಇಸಾಕ್ ಹಾಜಿ ನಿಜಾಮ್ ಅವರು ನೀಡಿ ಸಹಾಯ ಮಾಡಿದರು.

ಸಾಮಾನ್ಯ ವಿಮಾನ ಸೇವೆ ರದ್ದುಗೊಂಡ ಕಾರಣ ತಾಯಿನಾಡು ತೆರಳಲು ಸಾಧ್ಯವಾಗದ ಪ್ರವಾಸಿ ಕನ್ನಡಿಗರಿಗೆ ಫುಜೆರಾ ಮತ್ತು ಒಮಾನಿನ ಮಸ್ಕತ್ ವಿಮಾನ ನಿಲ್ದಾಣ ತನಕ ಬಸ್ ವ್ಯವಸ್ಥೆ ಕಲ್ಪಿಸಿ ಸುರಕ್ಷಿತವಾಗಿ ತಾಯಿನಾಡು ಸೇರುವಂತೆ ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗ ಜೊತೆಯಲ್ಲಿ ನಿಂತು ಕಾರ್ಯ ನಿರ್ವಹಿಸಿ ಯುದ್ಧದಿಂದಾಗಿ ದುಬೈಯಲ್ಲಿ ಸಿಲುಕಿಕೊಂಡಿರುವ ಪ್ರವಾಸಿ ಕನ್ನಡಿಗರ ಪ್ರಶಂಸೆಗೆ ಪಾತ್ರರಾದರು.

ಯುಏಈ ಯಲ್ಲಿ ಇರುವ ಅನೇಕ ಕನ್ನಡಪರ, ಜಾತಿಪರ, ಸಾಮಾಜಿಕ, ಧಾರ್ಮಿಕ ಸಂಘಟನೆಗಳು ಒಟ್ಟುಗೂಡಿ ಕಾರ್ಯಾಚರಿಸುತ್ತಿರುವ ಕನ್ನಡಿಗಾಸ್ ಹೆಲ್ಪ್ ಲೈನ್ ಜೊತೆ ಸೇರಿ ಸಹ ಹೆಮ್ಮೆಯ ದುಬೈ ಕನ್ನಡ ಸಂಘ ಸಹಾಯ ಕಾರ್ಯ ನಿರ್ವಹಿಸಿತ್ತು.