ಆಸ್ಟ್ರೇಲಿಯಾ: ಹೆಲಿಕಾಪ್ಟರ್​ವೊಂದು ಹೋಟೆಲ್​ ಮೇಲ್ಛಾವಣಿಗೆ ಗುದ್ದಿದ ಪರಿಣಾಮ ಪೈಲಟ್​​ ಸಾವನ್ನಪ್ಪಿದ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.

ಹೆಲಿಕಾಪ್ಟರ್​ ಗುದ್ದಿದ್ದಂತೆ ನಿಯಂತ್ರಣ ತಪ್ಪಿ ಹೋಟೆಲ್​ ಮೇಲೆ ಬಿದ್ದಿದೆ. ಅಲ್ಲಿ ತಂಗಿದ್ದ ನೂರಾರು ಅತಿಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಟ್ವಿನ್​ ಇಂಜಿನ್​ ಹೆಲಿಕಾಪ್ಟರ್​ ಹೋಟೆಲ್​ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿದ್ದವರನ್ನು ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಬಂದ ತುರ್ತು ನಿಗಮದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಹೆಲಿಕಾಪ್ಟರ್​ ಅವಘಡದಲ್ಲಿ ಪೈಲಟ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಪೈಲಟ್​ ಮತ್ತು ಹೆಲಿಕಾಪ್ಟರ್​ ಅಪಘಾತದ ಕುರಿತು ತನಿಖೆ ಶುರು ಮಾಡಿದ್ದಾರೆ.