ಬೀಜಿಂಗ್: ಚೀನಾದ ಜಗದೇಕ ಸುಂದರಿ ಗವರ್ನರ್ ಎಂದೇ ಹೆಸರು ಮಾಡಿದ್ದ ಚಾಂಗ್ ಯಾಂಗ್ಗೆ 13 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ.
ಚಾಂಗ್ ಯಾಂಗ್ ತಮ್ಮ ಸೌಂದರ್ಯದಿಂದಲೇ ಹೆಸರು ಮಾಡಿದ್ದವರು. ಚೀನಾದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿಯೇ ‘ಬ್ಯೂಟಿಫುಲ್ ಗವರ್ನರ್ ಎಂಬ ಖ್ಯಾತಿಯನ್ನೆ ಪಡೆದಿದ್ದರು. ಈ ನೈರುತ್ಯ ಚೀನಾದ ರಾಜ್ಯಪಾಲೆಯಾಗಿ ಮತ್ತು ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಚಾಂಗ್ ಯಾಂಗ್ ಈಗ ಕಂಬಿ ಹಿಂದೆ ಹೋಗಿದ್ದಾರೆ.
ತಮಗಿಂತ ಕೆಳದರ್ಜೆಯ ಅಧಿಕಾರಿಯೊಂದಿಗೆ ದೈಹಿಕ ಸಂಬಂಧ ಬೆಳಸಿದ ಆರೋಪ ಹಾಗೂ 6 ಕೋಟಿ ಯುವನ್ ಲಂಚ ಪಡೆದ ಆರೋಪದ ಮೇಲೆ ಈಗ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದೆ. 22 ವಯಸ್ಸಿನಲ್ಲಿ ಸಿಪಿಸಿ ಪಕ್ಷವನ್ನು ಸೇರಿಕೊಂಡ ಅವರು ಮುಂದೆ ನ್ಯಾಷನಲ್ ಪೀಪಲ್ ಕಾಂಗ್ರೆ್ನಲ್ಲಿ ಡೆಪ್ಯೂಟಿಯಾಗಿ ನೇಮಕಗೊಂಡರು.
ಚಾಂಗ್ನ ಸುತ್ತ ಜನವರಿ ವೇಳೆ ಹಲವು ವಿವಾದಗಳು ಬೆನ್ನು ಬಿದ್ದವು. ಹಲವು ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ತಮ್ಮ ಅಧಿಕಾರ ಬಳಸಿಕೊಂಡು ಲಂಚವನ್ನು ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಸುದ್ದಿ ಮಾಡಿದ್ದವು 1 ಲಕ್ಷ 70 ಸಾವಿರ ಸ್ಕೇರ್ ಮೀಟರ್ ಜಾಗವನ್ನು ತಮಗೆ ಅತ್ಯಂತ ಆತ್ಮೀಯರಾಗಿದ್ದ ಉದ್ಯಮಿಯೊಬ್ಬರಿಗೆ ನೀಡಲು ಒಪ್ಪಿಗೆ ನೀಡಿದ್ದು ಹಾಗೂ ಆ ಡೀಲಿಂಗ್ನಲ್ಲಿ ಚಾಂಗ್ ಲಂಚ ಪಡೆದಿದ್ದರು ಅನ್ನೋ ಆರೋಪ ಇದೆ.
ಇದೇ ಆರೋಪದ. ಉದ್ಯಮ ಸ್ಥಾಪನೆಗೆ ಮಂಜೂರಾದ ಜಾಗದಲ್ಲಿ ಬಳಿಕ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಶುರುವಾಗಿದ್ದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದ್ದವು. ವೈಯಕ್ತಿಕವಾಗಿ ಒಪ್ಪಂದ ಮಾಡಿಕೊಂಡು ಉದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಡೀಲ್ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು ಇಷ್ಟು ಮಾತ್ರವಲ್ಲ ತಮ್ಮದೇ ಕಚೇರಿಯಲ್ಲಿ ಕೆಳ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ ಆರೋಪವು ಕೂಡ ಚಾಂಗ್ ಮೇಲೆ ಬಂದಿದ್ದು ಸದ್ಯ ಅವರಿಗೆ 13 ವರ್ಷ ಕಾರಾಗೃಹ ಶಿಕ್ಷೆಯ ಜೊತೆಗೆ 1 ಕೋಟಿ 63 ಲಕ್ಷ ಭಾರತೀಯ ರೂಪಾಯಿಯಷ್ಟು ದಂಡ ವಿಧಿಸಲಾಗಿದೆ.

