ಪ್ಯಾರಿಸ್​: ಕೆಲವು ದಿನಗಳ ಹಿಂದಷ್ಟೇ ಫ್ರಾನ್ಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದ ಟೆಲಿಗ್ರಾಮ್​ ಸಂಸ್ಥಾಪಕ ಪಾವೆಲ್ ದುರೊವ್​ಗೆ ಫ್ರೆಂಚ್​ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ದುರೊವ್​ ಸ್ಥಾಪಿತ ಟೆಲಿಗ್ರಾಮ್ ಆ್ಯಪ್​ನಲ್ಲಿ ಅಪ್ರಾಪ್ತರ ಲೈಂಗಿಕ ವಿಡಿಯೋಗಳು, ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಪ್ರೇರಣೆ, ಡ್ರಗ್​ ಟ್ರಾಫಿಕಿಂಗ್ ಮತ್ತು ವಂಚನೆ ಸೇರಿದಂತೆ ಹಲವು ಆರೋಪಗಳ ಮೇಲೆ ದುರೊವರನ್ನ ಬಂಧಿಸಲಾಗಿತ್ತು. ಈಗ ಫ್ರೆಂಚ್​ ಕೊರ್ಟ್​ ಷರತ್ತುಬದ್ಧ ಜಾಮೀನು ನೀಡಿ ಅವರನ್ನು ಬಿಡುಗಡೆ ಮಾಡಿದೆ.

ಷರತ್ತು ಬದ್ಧ ಜಾಮೀನಿಗೆ 50 ಲಕ್ಷ ಯುರೋಸ್​ ಅಂದ್ರೆ ಭಾರತದ 46 ಕೋಟಿ ರೂಪಾಯಿಗಳ ಬಾಂಡ್​ ಮೇಲೆ ದುರೊವ್​ನನ್ನು ಬಿಡುಗಡೆ ಮಾಡಲಾಗಿದೆ. ಅದು ಅಲ್ಲದೇ ದುರೊವ್​ಗೆ ಫ್ರೆಂಚ್ ಕೋರ್ಟ್ ಅನೇಕ ಷರತ್ತುಗಳನ್ನು ವಿಧಿಸಿದೆ.

ಸದಾ ದೇಶದಿಂದ ದೇಶಕ್ಕೆ ಅಲೆದಾಡುವ ವಿಲಾಸಿ ಬದುಕಿನ ದುರೊವ್​ಗೆ ಫ್ರಾನ್ಸ್ ಬಿಟ್ಟು ಎಲ್ಲೂ ತೆರಳದಂತೆ ಹೇಳಿದೆ ಅಲ್ಲದೇ ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗಿ ರುಜು ಹಾಕಬೇಕ ಎಂದು ಕೂಡ ಷರತ್ತು ವಿಧಿಸಿದೆ.