ಬ್ರೂನೈ: ಬ್ರೂನೈ ದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆ 4) ಅಲ್ಲಿನ ದೊರೆ ಹಾಜಿ ಹಸನಲ್‌ ಬೊಲ್ಕಿಯಾ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಎಲ್ಲಕ್ಕಿಂತಲೂ ಅಲ್ಲಿನ ಸಿರಿವಂತಿಕೆಯೇ ಹೆಚ್ಚು ಸುದ್ದಿಯಾಗಿದೆ.

ಬ್ರೂನೈ ರಾಜಧಾನಿ ಬಂದಾರ್‌ ಸೆರಿ ಬಿಗಾವನ್‌ನಲ್ಲಿ ಮಹತ್ವದ ಮಾತುಕತೆ ನಡೆಸಿದ್ದು,ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರನ್ನು ಭೇಟಿ ಮಾಡಿ ಸಂತೋಷವಾಗಿದೆ.

ನಮ್ಮ ಮಾತುಕತೆಗಳು ವಿಶಾಲವಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಭದ್ರಪಡಿಸುವ ಮಾರ್ಗಗಳನ್ನು ಒಳಗೊಂಡಿವೆ. ವ್ಯಾಪಾರ ಸಂಬಂಧಗಳು, ವಾಣಿಜ್ಯ ಸಂಪರ್ಕಗಳು ಮತ್ತು ಜನರಿಂದ ಜನರಿಗೆ ವಿನಿಮಯವನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ’ ಎಂದು ಬರೆದಿದ್ದಾರೆ.

ದೇಶದ ಬ್ರುನೈ ಸುಲ್ತಾನ್ ಹಸನಲ್ ಬೋಲ್ಕಿಯಾಹ್ ಸಾಮಾನ್ಯ ವ್ಯಕ್ತಿ ಅಲ್ಲವೇ ಅಲ್ಲ. ಈತನ ಐಷಾರಾಮಿ ಜೀವನಕ್ಕೆ ಮತ್ತೊಂದು ಉದಾಹರಣೆ ನೀಡೋಕೆ ಸಾಧ್ಯವೇ ಇಲ್ಲ.

ಸುಲ್ತಾನ್ ಹಸನಲ್ ಬೋಲ್ಕಿಯಾಹ್ ವಿಶ್ವದ ಶ್ರೀಮಂತ ರಾಜರಲ್ಲಿ ಒಬ್ಬರು. ಹಸನಲ್ ಬೋಲ್ಕಿಯಾಹ್ ಅವರು 1946ರ ಜುಲೈ 15, ರಂದು ಜನಿಸಿದರು. ಅವರು 1967 ರಿಂದ ಬ್ರುನೈನ ರಾಜರಾಗಿದ್ದಾರೆ ಮತ್ತು ಸುಮಾರು 59 ವರ್ಷಗಳ ಕಾಲ ಅಧಿಕಾರದಲ್ಲಿದ್ದಾರೆ.
ಅವರ ನಿವ್ವಳ ಮೌಲ್ಯ ಸುಮಾರು 30 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ, ಇದು ಅವರನ್ನು ವಿಶ್ವದ ಶ್ರೀಮಂತ ರಾಜರಲ್ಲಿ ಒಬ್ಬರನ್ನಾಗಿ ಮಾಡಿದೆ.

ಸುಲ್ತಾನನ ಅರಮನೆ, ಇಸ್ತಾನಾ ನೂರುಲ್ ಇಮಾನ್, 2 ಮಿಲಿಯನ್ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಅರಮನೆಯಲ್ಲಿ 1770 ಕೊಠಡಿಗಳು, 257 ಸ್ನಾನಗೃಹಗಳು ಮತ್ತು 110 ಕಾರು ಗ್ಯಾರೇಜ್‌ಗಳಿವೆ.

ಅರಮನೆಯ ಗುಮ್ಮಟವನ್ನು 22 ಕ್ಯಾರೆಟ್ ಚಿನ್ನದಿಂದ ಅಲಂಕರಿಸಲಾಗಿದೆ ಮತ್ತು ಇದರ ಬೆಲೆ 2550 ಕೋಟಿ ರೂ.ಗಳಿಗೂ ಹೆಚ್ಚು. ಅರಮನೆಯಲ್ಲಿ ಚಿನ್ನದ ಬೇಸಿನ್‌ಗಳು ಮತ್ತು ಕಾರುಗಳನ್ನು ಸಹ ಚಿನ್ನದಿಂದ ಅಲಂಕರಿಸಲಾಗಿದೆ. ಇನ್ನು ಅವರು ‘ಫ್ಲೈಯಿಂಗ್‌ ಪ್ಯಾಲೇಸ್‌’ ಎಂದು ಕರೆಯಲ್ಪಡುವ ವೈಯಕ್ತಿಕ ವಿಮಾನವನ್ನು ಹೊಂದಿದ್ದಾರೆ. ವಿಮಾನದ ಒಳಭಾಗದಲ್ಲಿ ಚಿನ್ನವನ್ನು ವ್ಯಾಪಕವಾಗಿ ಬಳಸಲಾಗಿದೆ.

— Narendra Modi (@narendramodi) September 4, 2024

Brunei Darussalam