ಅಮೆರಿಕ: ಸ್ಕೂಲ್ ಬಸ್ಸಿನಲ್ಲಿ ವಿಶೇಷ ಚೇತನ ಮಗುವಿಗೆ ಶಾಲಾ ಸಿಬ್ಬಂದಿ ಮನ ಬಂದಂತೆ ಥಳಿಸಿರುವ ಘಟನೆ ಅಮೆರಿಕದ ಡೆನ್ವರ್ನಲ್ಲಿ ನಡೆದಿದೆ.
ಡೆನ್ವರ್ ಪಬ್ಲಿಕ್ ಸ್ಕೂಲ್ನ ಸಿಬ್ಬಂದಿ ಕಿಯಾರಾ ಜೋನ್ಸ್ ಎಂಬ ಮಹಿಳೆ ಮಗುವಿಗೆ ಥಳಿಸಿದ್ದು, ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಬಸ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
@RokerGlasses ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಹಿಳೆ ವಿದ್ಯಾರ್ಥಿಗೆ ಥಳಿಸುತ್ತಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ‘ಮಹಿಳೆಗೆ ಕಠಿಣ ಶಿಕ್ಷೆಯನ್ನು ನೀಡಬೇಕು’ ಎಂದು ಸಾಕಷ್ಟು ನೆಟ್ಟಿಗರು ಆಗ್ರಹಿಸಿದ್ದಾರೆ.
Meet Kiarra Jones, a employee of Denver’s Littleton Public Schools.
Watch her beat a disabled child on a school bus.
Can we bring back public executions now?
pic.twitter.com/eRROiyRvKF— Joe Has Dementia (@RokerGlasses) April 9, 2024