ಮಧ್ಯ ಏಷ್ಯಾ: ಟಿಯಾನ್ ಶಾನ್ ಪರ್ವತ ಶ್ರೇಣಿಗಳ ಮೈ ನಡುಗಿಸುವ ಚಳಿ, ಆಮ್ಲಜನಕದ ಕೊರತೆ ಮತ್ತು ಅತಿನೇರಳೆ ಕಿರಣಗಳ ನಡುವೆಯೂ ಸವಾಲು ಹಾಕಿ ಬೆಳೆಯುವ ಏಕೈಕ ಸಸ್ಯ ‘ಹಿಮ ಕಮಲ’. ಸುಮಾರು 10,000 ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ಮಾತ್ರ ಕಂಡುಬರುವ ಈ ಗಿಡವು ಅರಳಲು ಬರೋಬ್ಬರಿ 5 ರಿಂದ 8 ವರ್ಷ ಬೇಕು.

ವಿಶೇಷವೆಂದರೆ, ಇದು ತನ್ನ ಇಡೀ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಹೂ ಬಿಡುತ್ತದೆ. ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಗಳಲ್ಲಿ ಸಂಜೀವಿನಿಯಂತೆ ಬಳಸಲ್ಪಡುವ ಈ ಹೂವು ಈಗ ಅಳಿವಿನ ಅಂಚಿನಲ್ಲಿದೆ. ಕ್ಲೈಮೇಟ್ ಚೇಂಜ್ ಮತ್ತು ಅತಿಯಾದ ಕಟಾವು ಈ ಅಪರೂಪದ ಸಸ್ಯಕ್ಕೆ ಮುಳುವಾಗಿದೆ.

View this post on Instagram

A post shared by News Karnataka (@newskarnataka)