ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರ ಇಳಿಸಿ ಗುಂಡಿನ ದಾಳಿ ನಡೆಸಿ 23 ಮಂದಿಯನ್ನು ಕೊಂದು ಹಾಕಿದ್ದಾರೆ.

ಪಾಕಿಸ್ತಾನದ ಬಲೂಚಿಸ್ತಾನದ ರಾರಶಮ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಬಸ್​ ನಿಲ್ಲಿಸಿ ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿದ ಬಂದೂಕುಧಾರಿಗಳು 23 ಪ್ರಯಾಣಿಕರನ್ನು ಕೊಲೆ ಮಾಡಿದ್ದಾರೆ.

ಆಕ್ರಮಣಕಾರರು ಅಂತರ-ಪ್ರಾಂತೀಯ ಬಸ್‌ಗಳು ಮತ್ತು ಟ್ರಕ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಶಸ್ತ್ರಸಜ್ಜಿತ ಪುರುಷರು ಹೆದ್ದಾರಿಯನ್ನು ತಡೆದು, ವಾಹನಗಳನ್ನು ಅಡ್ಡಿಪಡಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ಗುರುತಿನ ಚೀಟಿ ತಪಾಸಣೆ ಮಾಡಿ ಗುಂಡಿಟ್ಟು ಪ್ರಯಾಣಿಕರನ್ನು ಕೊಂದು ಹಾಕಿದ್ದಾರೆ.

ಅಲ್ಲದೆ ಹತ್ಯೆಯ ನಂತರ, ದಾಳಿಕೋರರು ಸ್ಥಳದಿಂದ ಪಲಾಯನ ಮಾಡುವ ಮೊದಲು ಹತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಕರೆದಿದ್ದು, ಸೂಕ್ತ ಕ್ರಮದ ಎಚ್ಚರಿಕೆ ನೀಡಿದ್ದಾರೆ.