ನವದೆಹಲಿ: ಗಲ್ವಾನ್ ಘರ್ಷಣೆ ಬಳಿಕ ಭಾರತ ಚೀನಾ ಸಂಬಂಧ ಹಳಸಿದೆ. ಅದೇ ರೀತಿ ರಾಜತಾಂತ್ರಿಕ ಸಂಬಂಧ ವೀಸಾ ನೀಡಿಕೆ ಕುರಿತ ವಿಚಾರಗಳಲ್ಲಿ ಎರಡೂ ರಾಷ್ಟ್ರಗಳು ಭಿನ್ನಾಭಿಪ್ರಾಯ ಹೊಂದಿವೆ.
ಇದೀಗ ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಯೋಜನೆ (ಪಿಎಲ್ಐ)ಯಲ್ಲಿ ವ್ಯಾಪ್ತಿಯಲ್ಲಿ ಬರುವ ಕಂಪನಿಗಳಲ್ಲಿ ಕೆಲವು ವಿಭಾಗಗಳಲ್ಲಿ ಚೀನಾ ಪರಿಣತರ ಅಗತ್ಯ ಇರುವುದರಿಂದ ವೀಸಾ ನೀಡಿಕೆಗೆ ಕೆಲವು ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಆಗಸ್ಟ್ನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ್ದ ನಿಯಮಗಳ ಬಗ್ಗೆ ಆಕ್ಷೇಪ ಕೇಳಿ ಬಂದಿತ್ತು. ಹೀಗಾಗಿ, ಸರ್ಕಾರ ಚೀನಾ ಪರಿಣತರಿಗೆ ವೀಸಾ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ನಿಯಮಗಳನ್ನು ರೂಪಿಸಿದೆ.