ಮಾಸ್ಕೋ: ರಷ್ಯಾದಲ್ಲಿ 22 ಜನರಿದ್ದ ಹೆಲಿಕಾಪ್ಟರ್ ರಷ್ಯಾದ ಪೂರ್ವದಲ್ಲಿರುವ ಕಮ್ಚಾಟ್ಕಾ ಪೆನಿನ್ಸುಲಾ ದ್ವೀಪ ಪ್ರದೇಶದಲ್ಲಿ ಕಣ್ಮರೆಯಾಗಿರುವುದಾಗಿ ವರದಿಯಾಗಿದೆ.Mi-8T ಹೆಲಿಕಾಪ್ಟರ್ ವಚ್ಕಜೆಟ್ಸ್ ಜ್ವಾಲಾಮುಖಿಯ ಬಳಿಯ ನೆಲೆಯಿಂದ ನಿರ್ಗಮಿಸಿತು. ಆದರೆ, 04:00 GMT ನಿಗದಿತ ಸಮಯದಲ್ಲಿ ವರದಿ ಮಾಡಲು ವಿಫಲವಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಫೆಡರಲ್ ಏರ್ ಟ್ರಾನ್ಸ್‌ಪೋರ್ಟ್ ಏಜೆನ್ಸಿಯ ಪ್ರಾಥಮಿಕ ವರದಿಗಳಿಂದ ಹೆಲಿಕಾಪ್ಟರ್ ನಾಪತ್ತೆಯಾಗಿರುವ ವಿಚಾರ ದೃಢಪಡಿಸಲಾಗಿದೆ ಮತ್ತು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಶನಿವಾರ ವಿಚಾರ ಬಹಿರಂಗಪಡಿಸಿದೆ. ಹೆಲಿಕಾಪ್ಟರ್ ನಲ್ಲಿ 19 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು. ಹೆಲಿಕಾಪ್ಟರ್ ನಾಪತ್ತೆಯಾಗಿರುವ ಬೆನ್ನಲ್ಲೇ ರಕ್ಷಣಾ ತಂಡ ಹುಡುಕಾಟ ಆರಂಭಿಸಿದೆ.

