News Karnataka Kannada
Wednesday, May 01 2024
ವಿದೇಶ

ವೈನ್‌ ನಾಶಪಡಿಸಲು ಫ್ರಾನ್ಸ್‌ಗೆ 1425 ಕೋಟಿ ರೂ. ಪಾವತಿ !

destroy the wine
Photo Credit : Freepik

ಫ್ರಾನ್ಸ್‌ನಲ್ಲಿ ವೈನ್‌ ಬೆಲೆ ಇಳಿಕೆಯಾಗಿದೆ ಎಂಬ ಕಾರಣಕ್ಕೆ ಹೆಚ್ಚುವರಿ ವೈನ್‌ ಅನ್ನು ನಾಶ ಮಾಡಲಾಗುತ್ತಿದೆ. ವಿಚಿತ್ರವೆಂದರೆ ವೈನ್‌ ನಾಶಪಡಿಸಲೆಂದೇ ಫ್ರಾನ್ಸ್‌ಗೆ ಐರೋಪ್ಯ ಒಕ್ಕೂಟವು ಬರೋಬ್ಬರಿ 1425.70 ಕೋಟಿ ರೂ.(160 ದಶಲಕ್ಷ ಯೂರೋ) ಗಳನ್ನು ನೀಡಿದೆ.

ಹೌದು. . . ಇದು ನೀವು ನಂಬಲೇಬೇಕಾದ ವಿಚಾರ. ಕ್ರಾಫ್ಟ್ ಬಿಯರ್‌ನ ಜನಪ್ರಿಯತೆ ಹೆಚ್ಚಿರುವುದು, ಜೀವನವೆಚ್ಚ ಹೆಚ್ಚಳವಾಗಿರುವುದು, ಅತಿಯಾದ ಉತ್ಪಾದನೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ವೈನ್‌ ಕುಡಿಯುವವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಐರೋಪ್ಯ ಒಕ್ಕೂಟದಲ್ಲಿ ವೈನ್‌ ಉತ್ಪಾದನೆಯು ಶೇ.4ರಷ್ಟು ಹೆಚ್ಚಳವಾಗಿದ್ದರೂ, ಬಳಕೆ ಮಾತ್ರ ಶೇ.34ರಷ್ಟು ಕುಸಿತಗೊಂಡಿದೆ. ಹೀಗಾಗಿ, ವೈನ್‌ ಬೆಲೆಯೂ ಇಳಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟವು 1,420.70 ಕೋಟಿ ರೂ.ಗಳನ್ನು ಫ್ರಾನ್ಸ್‌ಗೆ ಪಾವತಿಸಿದೆ. ಈ ಮೊತ್ತವನ್ನು ಬಳಸಿಕೊಂಡು ಮಾರಾಟವಾಗದೇ ಉಳಿದ ವೈನ್‌ ಅನ್ನು ಖರೀದಿಸಿ, ಅದರಲ್ಲಿರುವ ಆಲ್ಕೋಹಾಲ್‌ ಅನ್ನು ಪ್ರತ್ಯೇಕಿಸಿ ಹ್ಯಾಂಡ್‌ ಸ್ಯಾನಿಟೈಸರ್‌, ಸ್ವತ್ಛಗೊಳಿಸುವ ಉತ್ಪನ್ನಗಳು, ಸುಗಂಧದ್ರವ್ಯಗಳ ತಯಾರಿಕೆಗೆ ಬಳಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು