ತೈವಾನ್ಗೆ ತೆರಳುತ್ತಿದ್ದ ಕೊರಿಯನ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಮಾನ ಏಕಾಏಕಿ 30 ಸಾವಿರ ಅಡಿಯಿಂದ 9 ಸಾವಿರ ಅಡಿಗೆ ಇಳಿದಿದ್ದು, ಪ್ರಯಾಣಿಕರ ಸ್ಥಿತಿ ಅಸ್ತವ್ಯಸ್ತಗೊಂಡಿದೆ.
ಈಗಾಗಲೇ ಪ್ರಯಾಣಿಕರಿಗೆ ಆಕ್ಸಿಜನ್ ಮಾಸ್ಕ್ ಹಾಕಿಕೊಳ್ಳಲು ಸೂಚನೆ ನೀಡಲಾಗಿದ್ದರೂ ಕೂಡ, ಪ್ರಯಾಣಿಕರ ಕಿವಿ, ಹಾಗೂ ಮೂಗಿನಿಂದ ರಕ್ತಸ್ರಾವವನ್ನು ತಡೆಯಲು ಸಾಧ್ಯವಾಗಿಲ್ಲ. ಪೈಲಟ್ ಕೂಡಲೇ ವಿಮಾನವನ್ನು ಹಿಂದಕ್ಕೆ ತಿರುಗಿಸಲು ನಿರ್ಧರಿಸಿದರು, ಇಂಚೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ತಕ್ಷಣ 13 ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ದಕ್ಷಿಣ ಕೊರಿಯಾದ ಯೋನ್ಹಾಪ್ ಸುದ್ದಿಸಂಸ್ಥೆ ಪ್ರಕಾರ, ಶನಿವಾರ ಕೊರಿಯನ್ ಏರ್ ವಿಮಾನ ಕೆಇ-189 ಕ್ಯಾಬಿನ್ ಪ್ರೆಶರೈಸೇಷನ್ ಸಿಸ್ಟಮ್ನಲ್ಲಿ ಹಠಾತ್ ದೋಷ ಕಂಡು ಬಂದಿತ್ತು.

