ನ್ಯೂಯಾರ್ಕ್:   ಪೈಲಟ್​ ಸಾವನ್ನಪ್ಪಿದ ಹಿನ್ನೆಲೆಯಲ್ಲಿಸಿಯಾಟಲ್​ನಿಂದ ಇಸ್ತಾನ್​ಬುಲ್​ಗೆ ಹೊರಟಿದ್ದ ಟರ್ಕಿಶ್​ ಏರ್​ಲೈನ್ಸ್​ ವಿಮಾನವು ನ್ಯೂಯಾರ್ಕ್​ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಏಕಾಏಕಿ ಕ್ಯಾಪ್ಟನ್ ಕುಸಿದುಬಿದ್ದಿದ್ದರು ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಸಿಯಾಟಲ್‌ನಿಂದ 204 ಫ್ಲೈಟ್ ಟೇಕ್ ಆಫ್ ಆದ ನಂತರ ಪೈಲಟ್ ಇಲ್ಸೆಹಿನ್ ಪೆಹ್ಲಿವಾನ್, ಪ್ರಜ್ಞೆ ಕಳೆದುಕೊಂಡರು. ಟರ್ಕಿಶ್ ಏರ್ಲೈನ್ಸ್ ವಕ್ತಾರ ಯಾಹ್ಯಾ ಉಸ್ತುನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಕ್ಷಣವೇ ಚಿಕಿತ್ಸೆ ಸಿಕ್ಕರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ, ನಂತರ ಮತ್ತೋರ್ವ ಪೈಲಟ್ ಮತ್ತು ಸಹ-ಪೈಲಟ್ ನಿಯಂತ್ರಣವಹಿಸಿಕೊಂಡು ನ್ಯೂಯಾರ್ಕ್​ನಲ್ಲಿ ವಿಮಾನ ಕೆಳಗಿಳಿಸಿದರು.