ಅಮೇರಿಕಾದ ಓಹಿಯೋದಲ್ಲಿ ನಡೆದ ಬರ್ತ್​ ಡೇ ಪಾರ್ಟಿಯೊಂದರಲ್ಲಿ 27 ಮಂದಿ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆದ ಪರಿಣಾಮ ಒಬ್ಬರ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಭಾನುವಾರ ಬೆಳಗ್ಗೆ ಓಹಿಯೋದ ಅಕ್ರಾನ್​ನಲ್ಲಿ 27 ಮಂದಿ ಮೇಲೆ ಗುಂಡು ಹಾರಿಸಲಾಗಿದ್ದು, ಓರ್ವ ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಸ್ಥಳೀಯ ವರದಿಗಳ ಪ್ರಕಾರ ಗುಂಡಿನ ದಾಳಿಯ ನಂತರ ಹಲವು ಆಸ್ಪತ್ರೆಗಳನ್ನು ಲಾಕ್​ಡೌನ್ ಮಾಡಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಯಾವ ಕಾರಣಗಳಿಗಾಗಿ ಗುಂಡಿನ ದಾಳಿ ನಡೆಸಲಾಗಿದೆ, ಆತನಿಗೆ ಏನಾದರೂ ದ್ವೇಷವಿತ್ತೇ ಅಥವಾ ಮಾನಸಿಕ ಅಸ್ವಸ್ಥನೇ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.