ವಾಷಿಂಗ್ಟನ್: ಪ್ಯಾರಿಸ್ ಶೀಘ್ರದಲ್ಲೇ ಒಂದು ಮುಸ್ಲಿಂ ನಗರವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಫ್ರಾನ್ಸ್ನ ಗಡಿಗಳನ್ನು ಮೊದಲೇ ಮುಚ್ಚುವಲ್ಲಿ ವಿಫಲರಾದರು. ಈಗ ದೇಶದಲ್ಲಿ ಉಂಟಾಗಿರುವ ವ್ಯಾಪಕ ಅಶಾಂತಿಗೆ ವಲಸೆಯೇ ಕಾರಣ ಎಂದು ಟ್ರಂಪ್ ಆರೋಪಿಸಿದ್ದಾರೆ.
ಅಕ್ಟೋಬರ್ 19 ರಂದು ‘ಮರೀನ್ ಒನ್’ ಮೂಲಕ ಪ್ರಯಾಣ ಬೆಳೆಸುವ ಮುನ್ನ, ವೈಟ್ ಹೌಸ್ನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಮ್ಯಾಕ್ರನ್ ಅವರ ವಲಸೆ ನೀತಿಗಳನ್ನು ಟೀಕಿಸಿದ್ದಾರೆ.
ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ. ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ದೇಶಕ್ಕೆ ಪ್ರವೇಶಿಸುತ್ತಿರುವ ವಲಸಿಗರಿಗೆ ಸಂಬಂಧಿಸಿವೆ. ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ನನ್ನ ಸ್ನೇಹಿತ. ನಾನು ಅವರಿಗೆ ವರ್ಷಗಳ ಹಿಂದೆಯೇ ಎಚ್ಚರಿಕೆ ನೀಡಿದ್ದೆ. ಪ್ರಪಂಚದಾದ್ಯಂತ ಜನರನ್ನು ದೇಶದೊಳಗೆ ಬರಲು ಬಿಡುವ ಮೂಲಕ ಫ್ರಾನ್ಸ್ ತಪ್ಪು ಮಾಡುತ್ತಿದೆ ಎಂದು ನಾವು ಆಗಲೇ ಮ್ಯಾಕ್ರನ್ ಅವರಿಗೆ ಎಚ್ಚರಿಸಿದ್ದೆ. ಮೊದಲ ಬಾರಿಗೆ ಅವರನ್ನು ಭೇಟಿಯಾದಾಗ, ಗಡಿಗಳನ್ನು ಮುಚ್ಚುವಂತೆ ಸಲಹೆ ನೀಡಿದ್ದೆ ಎಂದು ಟ್ರಂಪ್ ತಿಳಿಸಿದ್ದಾರೆ.
ನಾವು ನಮ್ಮ ಗಡಿಗಳನ್ನು ಮುಚ್ಚಿದೆವು. ಆದರೆ ಅವರು ಹಾಗೆ ಮಾಡಲಿಲ್ಲ. ಫ್ರಾನ್ಸ್ ಇಂಧನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿ ನಿಯಂತ್ರಣದ ವಿಷಯದಲ್ಲಿ ಮ್ಯಾಕ್ರನ್ ಇನ್ನೂ ಮೊದಲೇ ಕ್ರಮ ಕೈಗೊಳ್ಳಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಪುನರುಚ್ಚರಿಸಿದ್ದಾರೆ.

