ಸಿಡ್ನಿ: ವಿಶ್ವಕಪ್ ಸೋಲಿನ ಬಳಿಕ ತಂಡದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಬಾಬರ್ ಅಜಂ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ಶಾನ್ ಮಸೂದ್ ರನ್ನು ನೇಮಕ ಮಾಡಲಾಗಿದೆ.
ಇದೀಗ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ತುಂಬುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಪಾಕಿಸ್ತಾನದಿಂದ ತಂದಿರುವ ತಮ್ಮ ಕಿಟ್ ಗಳು ಹಾಗೂ ಲಗೇಜ್ ಗಳನ್ನು ಟ್ರಕ್ ತುಂಬುತ್ತಿದ್ದು, ಈ ವೇಳೆ ಪಾಕಿಸ್ತಾನ ತಂಡದ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮಹಮದ್ ರಿಜ್ವಾನ್ ಸಹ ಆಟಗಾರರಿಗೆ ನೆರವು ನೀಡಿದ್ದು ಮಾತ್ರವಲ್ಲದೇ ಅಲ್ಲಿ ಆಟಗಾರರನ್ನು ನೋಡಲು ನೆರೆದಿದ್ದ ಅಭಿಮಾನಿಗಳಿಗೂ ಸೆಲ್ಫಿ ತೆಗೆದುಕೊಳ್ಳಲು ನೆರವು ನೀಡಿದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
Pakistan team has reached Australia to play 3 match Test series starting December 14.
Pakistani players loaded their luggage on the truck as no official was present. pic.twitter.com/H65ofZnhlF
— Cricketopia (@CricketopiaCom) December 1, 2023