ನೋಯ್ಡಾ: ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಸೂಪರ್‌ಟೆಕ್ ಇಕೋ ವಿಲೇಜ್ 2ನಲ್ಲಿ 200 ಕ್ಕೂ ಹೆಚ್ಚು ನಿವಾಸಿಗಳು ಕಲುಷಿತ ನೀರಿನಿಂದ ಅಸ್ವಸ್ಥರಾಗಿದ್ದಾರೆ ಎಂದು ಸೋಮವಾರ ವರದಿಯಾಗಿದೆ.

ಇಲ್ಲಿನ ಮಕ್ಕಳಿಗೆ ವಾಂತಿ ಮತ್ತು ಅತಿಸಾರದಂತಹ ರೋಗಲಕ್ಷಣಳು ಕಾಣಿಸಿಕೊಂಡಿವೆ. ಟ್ಯಾಂಕ್ ಸ್ವಚ್ಛಗೊಳಿಸದೇ ಇದ್ದ ಕಾರಣ ಇದು ಸಂಭವಿಸಿದೆ ಎಂದು ನಿವಾಸಿಗಳು ದೂರಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ನಾಲ್ಕು ಟವರ್‌ಗಳ ನಿವಾಸಿಗಳು, ನಿರ್ದಿಷ್ಟವಾಗಿ C-4, C-5, C-6 ಮತ್ತು C-7 ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದಾಗ ಸಮಸ್ಯೆ ಬೆಳಕಿಗೆ ಬಂದಿತ್ತು. 160 ಕ್ಕೂ ಹೆಚ್ಚು ಫ್ಲಾಟ್‌ಗಳನ್ನು ಹೊಂದಿರುವ 20 ಅಂತಸ್ತಿನ ಕಟ್ಟಡಗಳನ್ನು ಒಳಗೊಂಡಿರುವ ಈ ಗೋಪುರಗಳು ಕಳೆದ ವಾರ ಮೂರು ದಿನಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ನಿವಾಸಿಗಳು ಕಲುಷಿತ ನೀರು ಕುಡಿಯುವಂತಾಗಿದೆ.

ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ. ಸೋಮವಾರ ಬೆಳಗ್ಗೆ ಭೇದಿ, ಜ್ವರ ಮತ್ತು ವಾಂತಿಯಿಂದ ತಮ್ಮ ಮೂರು ವರ್ಷದ ಮಗ ಅಸ್ವಸ್ಥಗೊಂಡಿದ್ದು , ಇದೀಗ ನೋಯ್ಡಾದ ಸುರ್ಭಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ನಿವಾಸಿ ಅಭಿರಾಮ್ ಸಿಂಗ್ ಹೇಳಿದ್ದಾರೆ.