ವಾಷಿಂಗ್ಟನ್‌: ಚೀನದ ಹೊಸ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಯೊಂದು ಮುಳುಗಡೆಯಾಗಿರುವ ಬಗ್ಗೆ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಚೀನಕ್ಕೆ ಹೊಸ ಮುಜುಗರ ತಂದೊಡ್ಡಿದೆ. ಮೇ ಅಥವಾ ಜೂನ್‌ ವೇಳೆಯಲ್ಲಿ ಚೀನದ ವುಹಾನ್‌ನಲ್ಲಿರುವ ವುಚಾಂಗ್‌ ಹಡಗುಕಟ್ಟೆಯಲ್ಲಿ ಸಬ್‌ಮರಿನ್‌ ಮುಳುಗಡೆಯಾಗಿರುವ ಸಾಧ್ಯತೆ ಇದೆ ಎಂದು ಅಮೆರಿಕದ ರಕ್ಷಣ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ವಾಷಿಂಗ್ಟನ್‌ನಲ್ಲಿರುವ ಚೀನ ರಾಯ ಭಾರ ಕಚೇರಿ ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದೆ.

370ಕ್ಕೂ ಹೆಚ್ಚು ಹಡಗುಗಳನ್ನು ಹೊಂದುವ ಮೂಲಕ ಚೀನ ವಿಶ್ವದ ಅತೀದೊಡ್ಡ ನೌಕಾಪಡೆ ಹೊಂದಿದೆ. ಜತೆಗೆ ಹೊಸ ತಲೆಮಾರಿನ ಪರ ಮಾಣು ಸಶಸ್ತ್ರ ಜಲಾಂತರ್ಗಾಮಿ ನೌಕೆ ಗಳನ್ನೂ ನಿರ್ಮಿಸುತ್ತಿದೆ. ಈ ಹೊತ್ತಿನಲ್ಲಿ ಈ ಜಲಾಂತರ್ಗಾಮಿ ಮುಳುಗಡೆ ಚೀನಕ್ಕೆ ದೊಡ್ಡ ಪೆಟ್ಟಾಗಬಹುದು.ಈ ಪರಿಸ್ಥಿತಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ತಿಳಿಸಲು ಯಾವುದೇ ವಿಷಯವಿಲ್ಲ. ಮುಳುಗಡೆಗೆ ಕಾರಣ ತಿಳಿದಿಲ್ಲ. ಅಥವಾ ಆ ವೇಳೆ ಪರಮಾಣು ಇಂಧನ ಇದ್ದಿರುವ ಬಗ್ಗೆಯೂ ಮಾಹಿತಿ ಇಲ್ಲ ಎಂದು ವಕ್ತಾರರು ಹೇಳಿದ್ದಾರೆ.