News Karnataka Kannada
Monday, May 13 2024
ವಿದೇಶ

ಲೇಖಕ ‘ಜಾನ್ ಫೋಸ್’ಗೆ ಸಂದ 2023ರ ಸಾಹಿತ್ಯ ನೊಬೆಲ್ ಪ್ರಶಸ್ತಿ

Nobel Prize
Photo Credit : Twitter

ಸ್ಟಾಕ್‌ಹೋಮ್: ನಾರ್ವೆಯ ಲೇಖಕ ಮತ್ತು ನಾಟಕಕಾರ ಜಾನ್ ಫೋಸ್ಸೆ 2023 ರ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಾರ್ವೇಜಿಯನ್ ಕಾದಂಬರಿಕಾರ ಮತ್ತು ನಾಟಕಕಾರ ಜಾನ್ ಫೋಸ್ಸೆ ಅವರಿಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಜಾನ್ ಫೋಸ್ಸೆ ಅವರ “for his innovative plays” and “prose which give voice to the unsayable” (ನವೀನ ನಾಟಕಗಳು ಮತ್ತು ಗದ್ಯಕ್ಕಾಗಿ ಹೇಳಲಾಗದವರಿಗೆ ಧ್ವನಿ ನೀಡುವ ಕಾದಂಬರಿಕಾರಿ) ಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

ನೊಬೆಲ್ ಪ್ರಶಸ್ತಿಗಳು 11 ಮಿಲಿಯನ್ ಸ್ವೀಡಿಷ್ ಕ್ರೋನರ್ (1 ಮಿಲಿಯನ್ ಡಾಲರ್) ನಗದು ಬಹುಮಾನವನ್ನು ಒಳಗೊಂಡಿವೆ.  ವಿಜೇತರು ಡಿಸೆಂಬರ್ ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ನೊಬೆಲ್ ಪ್ರಶಸ್ತಿ 18 ಕ್ಯಾರೆಟ್ ಚಿನ್ನದ ಪದಕ ಮತ್ತು ಸಹ ಪಡೆಯುತ್ತಾರೆ.

ಇನ್ನು ಫ್ರೆಂಚ್ ಮೂಲದ ಮೌಂಗಿ ಬಾವೆಂಡಿ, ಯುನೈಟೆಡ್ ಸ್ಟೇಟ್ಸ್‌ನ ಲೂಯಿಸ್ ಬ್ರೂಸ್ ಮತ್ತು ರಷ್ಯಾ ಮೂಲದ ಅಲೆಕ್ಸಿ ಎಕಿಮೊವ್ ಅವರು ಕಳೆದ ದಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ 2023 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಿದೆ. ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್’ಹುಲ್ಲಿಯರ್ ಅವರು ಅಟೊಸೆಕೆಂಡ್ ಬೆಳಕಿನ ಪಲ್ಸ್‌ಗಳನ್ನು ಉತ್ಪಾದಿಸುವಲ್ಲಿ ಅವರ ಪ್ರವರ್ತಕ ಕೆಲಸಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗು ಕೋವಿಡ್ -19 ಲಸಿಕೆಗಳ ಅಭಿವೃದ್ಧಿಗೆ ಅನುವು ಮಾಡಿಕೊಡುವ ಆವಿಷ್ಕಾರಗಳಿಗಾಗಿ ವಿಜ್ಞಾನಿಗಳಾದ ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್ಮನ್ ಅವರು 2023ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು