ಸಿಯೋಲ್:  ಕಿರುಕುಳ ನೀಡುವ ಉದ್ದೇಶದಿಂದ ಉತ್ತರ ಕೊರಿಯಾ  ಬಲೂನುಗಳಲ್ಲಿ ಹೊಲಸು, ಕಸ ಕಡ್ಡಿಗಳನ್ನು ತುಂಬಿಸಿ ದಕ್ಷಿಣ ಕೊರಿಯಾಕ್ಕೆ ಹಾರಿ ಬಿಟ್ಟಿವೆ.

ದಕ್ಷಿಣ ಕೊರಿಯಾದ‌  8 ಪ್ರಾಂತ್ಯಗಳಲ್ಲಿ ಸುಮಾರು 260 ಬಲೂನ್‌ಗಳು ಪತ್ತೆಯಾಗಿವೆ. ರಾಜಧಾನಿ ಸಿಯೋಲ್ ಮತ್ತು ದೇಶದ ಆಗ್ನೇಯ ಪ್ರಾಂತ್ಯದ ಜಿಯೊಂಗ್‌ಸಾಂಗ್‌ನಲ್ಲಿಯೂ ಬಲೂನ್‌ಗಳು ಬಿದ್ದಿವೆ.

ದಕ್ಷಿಣ ಕೊರಿಯಾದ ಅಧಿಕಾರಿಗಳು ಮನೆಯೊಳಗೆ ಇರುವಂತೆ ಜನರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಬಲೂನ್‌ಗಳ ಹತ್ತಿರ ಹೋಗಬೇಡಿ ಹಾಗೂ ಅವುಗಳನ್ನು ಮುಟ್ಟಬೇಡಿ ಎಂಬುದಾಗಿ ಸೂಚನೆ ನೀಡಿದ್ದಾರೆ.

ಬಲೂನ್‌ಗಳೊಂದಿಗೆ ಬಂದಿರುವ ಕಸದಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು, ಹಾಳಾದ ಶೂಗಳ ಭಾಗಗಳು ಮತ್ತು ಮಣ್ಣು ಸೇರಿವೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿಯ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ.

ಉತ್ತರ ಕೊರಿಯಾದ ಈ ಕ್ರಮದಿಂದ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ. ಇದೊಂದು ಬೆದರಿಕೆಯಾಗಿದ್ದು, ಇಂತಹ ಅಮಾನವೀಯ ಕ್ರಮಗಳನ್ನು ಕೂಡಲೇ ನಿಲ್ಲಿಸುವಂತೆ ದಕ್ಷಿಣ ಕೊರಿಯಾದ ಸೇನೆಯು ಉತ್ತರ ಕೊರಿಯಾಕ್ಕೆ ಎಚ್ಚರಿಕೆ ನೀಡಿದೆ.

ಬಲೂನ್‌ಗಳನ್ನು ಕಂಡ ದಕ್ಷಿಣ ಕೊರಿಯಾದ ಜನರು ಅದರ ವೀಡಿಯೋ ಹಾಗೂ ಫೋಟೋಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

According to the army, balloons were falling during the night at various locations across the country.

“We strongly warn North Korea to immediately stop its inhumane and vulgar actions,” said… pic.twitter.com/WkSaJa1vdO

— Bösartiger Fella ⚜️🔱 (@20gimsack) May 29, 2024