ಪ್ಲೈನ್ಸ್(ಅಮೆರಿಕ): ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮಂಗಳವಾರ (ಅ.01) 100ನೇ ವರ್ಷದ ಜನ್ಮ ದಿನಾಚರಣೆಯ ಸಂಭ್ರಮ ಆಚರಿಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷರಲ್ಲಿ 100 ವರ್ಷ ಪೂರೈಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜಿಮ್ಮಿ ಕಾರ್ಟರ್ ಅಮೆರಿಕದ ಹಿರಿಯ ರಾಜಕಾರಣಿ, ಅಮೆರಿಕದ 39ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಡೆಮೋಕ್ರಟಿಕ್ ಪಕ್ಷದ ಸದಸ್ಯರಾಗಿದ್ದ ಜಿಮ್ಮಿ ಕಾರ್ಟರ್ ಅವರು 1977ರಿಂದ 1981ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದರು. 1971ರಿಂದ 1975ರವರೆಗೆ ಜಾರ್ಜಿಯಾದ 76ನೇ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು.
ಜಿಮ್ಮಿ ಕಾರ್ಟರ್ ಅವರು ಜಾರ್ಜಿಯಾದ ಪ್ಲೈನ್ಸ್ ನಲ್ಲಿ 1924ರ ಅಕ್ಟೋಬರ್ 1ರಂದು ಜನಿಸಿದ್ದರು. ಜಿಮ್ಮಿ ಕಾರ್ಟರ್, ಪತ್ನಿ ರೋಸಾಲೈನ್ ಕಾರ್ಟರ್ ದಂಪತಿಗೆ ನಾಲ್ವರು ಮಕ್ಕಳು. ಜಿಮ್ಮಿ ಕಾರ್ಟರ್ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

