ಪಾಕಿಸ್ತಾನ :  ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಹಿಂದುಗಳು ಕೇವಲ ಬೆರಳೆಣಿಕೆಯಷ್ಟಿರುವ ಪಾಕಿಸ್ತಾನದಲ್ಲೂ ನವರಾತ್ರಿ ಸಂಭ್ರಮ ನಡೆಯುತ್ತದೆ. ಅಲ್ಲಿನ ಬೀದಿಯೊಂದರಲ್ಲಿ ನಡೆದ ದುರ್ಗಾದೇವಿಯ ಆರಾಧನೆಯ ವೀಡಿಯೋವೊಂದನ್ನು ಪಾಕಿಸ್ತಾನದ ಇನ್‌ಫ್ಲುಯೆನ್ಸರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ನವದುರ್ಗೆಯರ ಆರಾಧನೆಗೆ ಯಾವ ಗಡಿಗಳು ಇಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ.

ಅಂದಹಾಗೆ ಈ ವೀಡಿಯೋವನ್ನು ಪಾಕಿಸ್ತಾನದ ಇನ್‌ಫ್ಲುಯೆನ್ಸರ್ ಧೀರಜ್ ಮಂಧನ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  ವೈರಲ್ ಆದ ವೀಡಿಯೋದಲ್ಲಿ ಹಬ್ಬದ ಲೈಟಿಂಗ್ಸ್‌ಗಳಿಂದ ಕರಾಚಿಯ ಬೀದಿ ಕಂಗೊಳಿಸುತ್ತಿದ್ದು, ಬೀದಿ ಮಧ್ಯೆ ಪೆಂಡಾಲ್‌ನಲ್ಲಿ ದುರ್ಗಾದೇವಿಯನ್ನು ಕೂರಿಸಲಾಗಿದೆ. ಮಹಿಳೆಯರು ಮಕ್ಕಳೆಲ್ಲರೂ ದುರ್ಗಾದೇವಿಯ ಪೆಂಡಾಲ್ ಬಳಿ ಬಂದು ದೇವಿಗೆ ಕೈ ಮುಗಿದು ಹೋಗುತ್ತಿದ್ದಾರೆ.

 

View this post on Instagram

 

A post shared by Dheeraj (@iamdheerajmandhan)