ಇಟಲಿ: ಇಡೀ ನಗರದಲ್ಲೇ ಯಾರೂ ಕ್ರಿಕೆಟ್ ಆಡಬಾರದು. ಒಂದು ವೇಳೆ ಆದೇಶ ಮೀರಿ ಬ್ಯಾಟ್ ಬೀಸಿದರೆ ಅಂತವರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಇಟಲಿಯ ಮೊನ್ಫಾಲ್ಕೋನ್​ ನಗರದ ಮೇಯರ್ ಆದೇಶಿಸಿದ್ದಾರೆ.

ಇಟಲಿಯ ಮೊನ್ಫಾಲ್ಕೋನ್ ನಗರ ಸುಮಾರು 30,000 ಜನಸಂಖ್ಯೆ ಹೊಂದಿದ್ದು ಇಲ್ಲಿ ವಾಸಿಸುವ ಸಾಕಷ್ಟು ಜನರು ವಿದೇಶಿಯರು ಎನ್ನಲಾಗಿದೆ. ಇದರಲ್ಲಿ ಮುಖ್ಯವಾಗಿ ಬಾಂಗ್ಲಾದೇಶದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. 1990ರ ದಶಕದ ಬಂದರುಗಳಲ್ಲಿ ಕೆಲಸ ಮಾಡಲು ಬಂದು ಇಲ್ಲೇ ನೆಲೆಸಿದ್ದಾರೆ.

ಆದರೆ ಇವರು ಮೊದಲಿನಿಂದಲೂ ನಗರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಇನ್ನು ಇವರು ಕ್ರಿಕೆಟ್​ ಆಡುತ್ತಿರುವುದು ಇಟಲಿಯ ಸ್ಥಳೀಯ ಸಂಸ್ಕೃತಿ ಜೊತೆಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ನಗರದ್ಯಾಂತ ಕ್ರಿಕೆಟ್ ಅನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವಿದೇಶಿಯರಿಂದ ನಗರದ ಇತಿಹಾಸ ಹಾಗೂ ಸಂಸ್ಕೃತಿಯನ್ನು ನಿಧಾನವಾಗಿ ಅಳಿಸಲಾಗುತ್ತಿದೆ.

ಬಾಂಗ್ಲಾ ನಿವಾಸಿಗಳು ಏನನ್ನು ಕೊಡುಗೆ ನೀಡಿಲ್ಲ. ಹೀಗಾಗಿ ಈ ಸಿಟಿ ಬಿಟ್ಟು ಹೊರಗೆ ಕ್ರಿಕೆಟ್ ಆಡಬಹುದು. ಆದರೆ ನಗರದ ಒಳಗೆ ಕ್ರಿಕೆಟ್ ಆಡುವಂತೆ ಇಲ್ಲ. ಒಂದು ವೇಳೆ ಕ್ರಿಕೆಟ್ ಆಡಿದರೆ 100 ಯುರೋ ಅಂದರೆ 9,331 ರೂಪಾಯಿಗಳನ್ನ ದಂಡ ಕಟ್ಟಬೇಕಾಗುತ್ತದೆ ಎಂದು ಮೊನ್ಫಾಲ್ಕೋನ್​ ನಗರದ ಮೇಯರ್ ಅನ್ನಾ ಮಾರಿಯಾ ಸಿಸಿಂಟ್ ಹೇಳಿರುವುದು ವರದಿಯಾಗಿದೆ.