ಥಾಯ್ಲೆಂಡ್: ಮ್ಯಾನೇಜರ್‌ರೊಬ್ಬರು ಕಾರ್ಖಾನೆಯ ಉದ್ಯೋಗಿಗೆ ಅನಾರೋಗ್ಯದ ರಜೆ ನಿರಾಕರಿಸಿದದ ಬೆನ್ನಲ್ಲೇ ಆಕೆ ಕರ್ತವ್ಯ ನಿರ್ವಹಿಸುತ್ತ ಮೃತಪಟ್ಟ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ. ಮೇ (30) ಎಂದು ಗುರುತಿಸಲ್ಪಟ್ಟ ಮಹಿಳೆ, ಥೈಲ್ಯಾಂಡ್‌ನ ಸಮುತ್ ಪ್ರಕನ್ ಪ್ರಾಂತ್ಯದ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಉದ್ಯೋಗಿಯಾಗಿದ್ದರು.
ಮೇ (30) ಎಂದು ಗುರುತಿಸಲ್ಪಟ್ಟ ಮಹಿಳೆ, ಥೈಲ್ಯಾಂಡ್‌ನ ಸಮುತ್ ಪ್ರಕನ್ ಪ್ರಾಂತ್ಯದ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಉದ್ಯೋಗಿಯಾಗಿದ್ದರು. ಈಕೆ ಮೊದಲ ಬಾರಿಗೆ ಸೆ. 5 ರಿಂದ ಸೆ. 9 ರವರೆಗೆ ವೈದ್ಯಕೀಯ ಪ್ರಮಾಣಪತ್ರದೊಂದಿಗೆ ರಜೆ ತೆಗೆದುಕೊಂಡಿದ್ದರು. ಆದರೆ ಅದಾದ ಬಳಿಕ ದೊಡ್ಡ ಕರುಳಿನ ಉರಿಯೂತ ಹೆಚ್ಚಾಗಿತ್ತು. ಇದರಿಂದಾಗಿ ಆಸ್ಪತ್ರೆಯಲ್ಲಿ 4 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ.
ಡಿಸ್ಚಾರ್ಜ್ ಆದ ನಂತರ, ಮೇಗೆ ಮತ್ತೆ ಆರೋಗ್ಯ ಹದಗೆಟ್ಟಿದ್ದು, ಅನಾರೋಗ್ಯದ ರಜೆ ಕೇಳಿದ್ದಾರೆ. ಆದರೆ ಆಕೆಯ ಮ್ಯಾನೇಜರ್ ರಜೆ ಕೊಡಲು ನಿರಾಕರಿಸಿದ್ದಾರೆ. ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಆಕೆ ಕಾರ್ಖಾನೆಗೆ ತೆರಳಿದ್ದಳು. ಆದರೆ ಕೇವಲ 20 ನಿಮಿಷ ಕೆಲಸ ಮಾಡಿದ ಬಳಿಕ ಆಕೆ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ಶಸ್ತ್ರಚಿಕಿತ್ಸೆಗಾಗಿ ತಕ್ಷಣವೇ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

