ಕಾಂಗೋ: ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿರುವ ಸೆಂಟ್ರಲ್ ಮಕಾಲಾ ಜೈಲಿನಿಂದ ತಪ್ಪಿಸಿಕೊಳ್ಳಲು ಹೋಗಿ 129 ಕೈದಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಜತೆಗೆ 59 ಕೈದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಲ್ಲರೂ ಸೇರಿ ಜೈಲಿನಿಂದ ಓಡಿ ಹೋಗಲು ಪ್ರಯತ್ನ ಮಾಡಿದ್ದರು. ಆಂತರಿಕ ಸಚಿವ ಶಬಾನಿ ಲುಕೋ ಈ ವಿವರಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಮಕಾಲಾ ಜೈಲಿನಿಂದ ಕೈದಿಗಳು ಪರಾರಿಯಾಗಲು ಯತ್ನಿಸಿದ್ದರು, ಜೈಲು ಸಿಬ್ಬಂದಿ ಎಚ್ಚೆತ್ತು ಪರಿಸ್ಥಿತಿ ನಿಭಾಯಿಸಲು ಹೋದಾಗ ಮಾರಾಮಾರಿ ನಡೆದಿದೆ.
ಈ ವೇಳೆ ಅಡುಗೆ ಕೋಣೆಯಿಂದ ಬೆಂಕಿ ಆವರಿಸಿ 129 ಕೈದಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಜೈಲಿನ ಕಟ್ಟಡಕ್ಕೂ ಹಾನಿಯಾಗಿದೆ ಎಂದು ಸಚಿವ ಶಬಾನಿ ಲುಕೋ ತಿಳಿಸಿದ್ದಾರೆ. ಕೆಲವರು ನೂಕು ನುಗ್ಗಲು ಹಾಗೂ ಉಸಿರುಗಟ್ಟುವಿಕೆಯಿಂದಾಗಿ ಸಾವನ್ನಪ್ಪಿದ್ದಾರೆ. ಯಾವುದೇ ಕೈದಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರು ಸಾವನ್ನಪ್ಪಿದ್ದಾರೆ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

