News Karnataka Kannada
Monday, April 29 2024
ವಿದೇಶ

ಅದೃಷ್ಟ ಅಂದ್ರೆ ಇದಪ್ಪ: ಭಾರತೀಯ ಮೂಲದ ವ್ಯಕ್ತಿಗೆ 45 ಕೋಟಿ ರೂ. ಸಿಕ್ಕಿದ್ದು ಹೇಗೆ

Lucky is this: An Indian-origin man has been paid Rs 45 crore. How did you get it
Photo Credit : News Kannada

ದುಬೈ: ಕಳೆದ 11 ವರ್ಷಗಳಿಂದ ಯುಎಇಯಲ್ಲಿ ನೆಲೆಸಿರುವ ಭಾರತೀಯ ವಲಸಿಗರೊಬ್ಬರಿಗೆ ಅದೃಷ್ಟವೊಂದು ಖುಲಾಯಿಸಿದೆ.

ಭಾರತೀಯ ಮೂಲದ ಶ್ರೀಜು ಅವರು ಮಹಜೂಜ್ ಸ್ಯಾಟರ್ಡೇ ಮಿಲಿಯನ್ಸ್ ಸಾಪ್ತಾಹಿಕ ಡ್ರಾದ 64 ನೇ ಮಿಲಿಯನೇರ್ ಆಗಿದ್ದು 20 ಮಿಲಿಯನ್ AED ( 45,30,00,000 ರೂ.) ಗೆದ್ದಿದ್ದಾರೆ. ತೈಲ ಉದ್ಯಮವೊಂದರಲ್ಲಿ ಕಂಟ್ರೋಲ್ ರೂಂ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಶ್ರೀಜು ಅವರು ಕಳೆದ ವಾರದ ಲಾಟರಿ ಡ್ರಾ ದಲ್ಲಿ ಬಹುಮಾನ ಬಂದಿದೆ. ನಾನು ಸಾಪ್ತಾಹಿಕ ಡ್ರಾದಲ್ಲಿ ಬೃಹತ್‌ ಮೊತ್ತ ಗೆದ್ದಿರುವ ವಿಚಾರ ತಿಳಿದಾಗ ನನ್ನನ್ನೆ ನಾನು ನಂಬದಂತಾಯಿತು ಎಂದು ಶ್ರೀಜು ಹೇಳಿದ್ದಾರೆ.

ಅವಳಿ ಮಕ್ಕಳ ತಂದೆಯಾದ ಶ್ರೀಜು ಕಳೆದ ಮೂರು ವರ್ಷಗಳಿಂದ ಮಹಜೂಜ್ ಡ್ರಾದಲ್ಲಿ ಟಿಕೇಟ್‌ ಖರೀದಿಸುತ್ತಿದ್ದರು. ಒಂದಲ್ಲ ಒಂದು ದಿನ ನನಗೆ ಬಹುಮಾನ ಬರುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಆ ದಿನ ಇಷ್ಟು ಬೇಗ ಬರುತ್ತದೆ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಶ್ರೀಜು ಬಹುಮಾನದ ಹಣದಲ್ಲಿ ಭಾರತದಲ್ಲಿ ಮನೆಯೊಂದನ್ನು ಖರೀದಿಸಲು ಉದ್ದೇಶಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿದರೂ ಕೂಡ ಕೂಡ ಅವರು ಯುಎಇಯಲ್ಲಿ ಕೆಲಸ ಮುಂದುವರಿಸುವುದಾಗಿ ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು