News Karnataka Kannada
Tuesday, April 30 2024
ವಿದೇಶ

ಮೋದಿ ಅವರೊಂದಿಗೆ ಯೋಗ ದಿನ ಆಚರಿಸಲು ಕಾತುರನಾಗಿದ್ದೇನೆ: ವಿಶ್ವಸಂಸ್ಥೆ ಅಧ್ಯಕ್ಷ

Looking forward to celebrating Yoga Day with PM Modi: UN president
Photo Credit : News Kannada

ವಿಶ್ವಸಂಸ್ಥೆ: ಜೂನ್ 21 ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 9 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಎದುರು ನೋಡುತ್ತಿದ್ದೇನೆ ಎಂದು ಯುಎನ್ ಜನರಲ್ ಅಸೆಂಬ್ಲಿ ಅಧ್ಯಕ್ಷ ಸಿಸಾಬಾ ಕೊರೊಸಿ ಹೇಳಿದ್ದಾರೆ.

ಈ ಕುರಿತು ಕೊರೊಸಿ ಗುರುವಾರ ಟ್ವೀಟ್ ಮಾಡಿದ್ದು, ಜೂನ್ 21 ರಂದು ಬೆಳಿಗ್ಗೆ 8 ರಿಂದ 9 ರವರೆಗೆ (ಐಎಸ್ಟಿ 5.30 ರಿಂದ 6.30 ರವರೆಗೆ) ಕಾರ್ಯಕ್ರಮ ನಡೆಯಲಿದೆ.

ಯುಎನ್ ನೆಟ್‌ವರ್ಕ್‌ನಲ್ಲಿ (webtv.un.org) ನೇರ ಪ್ರಸಾರ ಮಾಡಲಾಗುವುದು ಎಂದು ವಿಶ್ವಸಂಸ್ಥೆ ಪ್ರಕಟಣೆ ತಿಳಿಸಿದೆ. 2014 ಸೆಪ್ಟೆಂಬರ್‌ ನಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ್ದು, ಜೂನ್ 21 (ವಿಶ್ವಯೋಗ ದಿನದಂದು) ಬೇಸಿಗೆಯ ಅಯನ ಸಂಕ್ರಾಂತಿಯನ್ನು ಆಚರಿಸಲು ಸಲಹೆ ನೀಡಿದ್ದರು.

ಆಗ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿದ್ದ ಅಶೋಕ್ ಮುಖರ್ಜಿ, ಯೋಗದಿನ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ದೊರೆಕಿಸುವ ನಿಟ್ಟಿನಲ್ಲಿ ಸರ್ವರೀತಿಯ ಪ್ರಯತ್ನ ಮಾಡಿದ್ದರು. ಕೇವಲ ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯುವಂತೆ ಮಾಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು