News Karnataka Kannada
Saturday, May 04 2024
ವಿದೇಶ

ಏಲಿಯನ್‌ ಶವಗಳ ಮೇಲೆ ಸಂಶೋಧನಾ ವರದಿ ಬೆಳಕು ಚೆಲ್ಲಿದೆ ಕುತೂಹಲದ ಅಂಶ

Lab Tests Carried Out on Mexico's 'Alien Bodies': ''No Evidence Of Any Assembly''
Photo Credit : IANS

ಮೆಕ್ಸಿಕೊ ಸಿಟಿ: ಮೆಕ್ಸಿಕೋ ನಗರದ ತಜ್ಞರು ಕಳೆದ ವಾರ ಬಹಿರಂಗಪಡಿಸಿದ ಏಲಿಯನ್‌ ಶವಗಳ ಮೇಲೆ ವ್ಯಾಪಕ ಸಂಶೋಧನೆ, ಪ್ರಯೋಗಗಳನ್ನು ನಡೆಸಲಾಗಿದೆ ಎಂದು ವರದಿ ಹೇಳಿದೆ. ಸೋಮವಾರ ನೂರ್ ಕ್ಲಿನಿಕ್‌ನಲ್ಲಿ ನೌಕಾಪಡೆಯ ಫೋರೆನ್ಸಿಕ್ ವೈದ್ಯ ಜೋಸ್ ಡಿ ಜೀಸಸ್ ಜಾಲ್ಸೆ ಬೆನಿಟೆಜ್ ಅವರು ಪರೀಕ್ಷೆಗಳನ್ನು ನಡೆಸಿದ್ದಾರೆ. ಡಾ. ಬೆನಿಟೆಜ್ ಅವರು ಈ ಅಸ್ತಿಪಂಜರಗಳು ಒಂದೇ ಪ್ರಾಣಿಗೆ ಸೇರಿದೆ ಎಂದು ಹೇಳಿದ್ದಾರೆ. ಈ ಮೂಲಕ ಈ ತಲೆಬುರುಡೆಗಳನ್ನು ಜೋಡಿಸಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಅನ್ಯಗ್ರಹ ಜೀವಿಗಳ ಅಸ್ಥಿಪಂಜರದ ಎಕ್ಸ್‌ರೇ, ಸಿಟಿ ಸ್ಕಾನ್, ಡಿಎನ್ಎ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗಿದೆ. ಕಳೇಬರದ ಎಲುಬುಗಳು, ತಲೆಬುರುಡೆ ಸೇರಿದಂತೆ ಎಲ್ಲವನ್ನು ಕೂಲಂಕುಷವಾಗಿ ಮೆಕ್ಸಿಕೋ ಸರ್ಕಾರಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗಿದೆ. ಸೆಪ್ಟೆಂಬರ್ 19 ರಂದು ಎಲ್ಲಾ ಪರೀಕ್ಷೆಗಳು ಮುಗಿದೆ. ಬಳಿಕ ಡಾ. ಡಾ. ಜೋಸ್ ಡೇ ಜೀಸಸ್ ಝಾಲ್ಸ್ ಬೆನಿಟೆಜ್, ಮೆಕ್ಸಿಕೋ ಸಂಸತ್ತಿನಲ್ಲಿ ಪ್ರದರ್ಶಿಸಿದ ಅನ್ಯಗ್ರಹ ಜೀವಿಗಳ ಅಸ್ಥಿಪಂಜರ ಅಸಲಿ ಎಂದಿದ್ದಾರೆ.

ಈ ನಿಗೂಢ ದೇಹಗಳು ಎತ್ತರದಲ್ಲಿ ಚಿಕ್ಕದಾಗಿರುತ್ತವೆ ಮತ್ತು ಸುಣ್ಣದ ಬಣ್ಣದಲ್ಲಿವೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ಮೂರು ಬೆರಳುಗಳ ಕೈಗಳು ಮತ್ತು ಕುಗ್ಗಿದ ತಲೆಗಳನ್ನು ಹೊಂದಿರುತ್ತವೆ ಎಂದು ವಿವರಿಸಿದ್ದಾರೆ. ಮೆಕ್ಸಿಕೋದ ರಾಷ್ಟ್ರೀಯ ಸ್ವಾಯತ್ತ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಕಾರ್ಬನ್ ಪರೀಕ್ಷೆಯ ಪ್ರಕಾರ, ಮಾದರಿಗಳು ಸುಮಾರು 1,000 ವರ್ಷಗಳಷ್ಟು ಹಳೆಯವಾಗಿದ್ದು ಈ ಅಸ್ಥಿಪಂಜರಗಳು ಭೂಮಿಯ ಮೇಲಿನ ಯಾವುದೇ ಪ್ರಾಣಿಗಳಿಗೆ ಸಂಬಂಧಿಸಿಲ್ಲ ಎಂದು ವಿಜ್ಞಾನಿ ಮೌಸ್ಸನ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು