ಟೆಹ್ರಾನ್‌: ಇಸ್ರೇಲ್‌-ಅಮೆರಿಕದ ಪ್ರತೀಕಾರದ ದಾಳಿಯ ನಡುವೆ ಇರಾನ್‌ ಹೊಸ ನಾಯಕನನ್ನ ಆಯ್ಕೆ ಮಾಡಿದೆ. ತಜ್ಞರ ಸಭೆಯು ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನ ಇರಾನ್‌ನ ಹೊಸ ಸರ್ವೋಚ್ಛ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಇರಾನ್‌ನ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ವರದಿಗಳ ಪ್ರಕಾರ, 56 ವರ್ಷದ ಮೊಜ್ತಬಾ ಅವರನ್ನ ದೇಶದ ನಿಯಂತ್ರಣ ವಹಿಸಿಕೊಳ್ಳಲು ಆಯ್ಕೆ ಮಾಡಲಾಗಿದ್ದು, ದೀರ್ಘಕಾಲದ ನಾಯಕನಾಗಿ ಮುಂದುವರಿಯಲು ಎದುರು ನೋಡುತ್ತಿದ್ದಾರೆ.

ಇದಕ್ಕೂ ಮುನ್ನ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಇರಾನ್‌ನ ಮಧ್ಯಂತರ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.