ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಹಾತಿರ್ ಸರೋವರದಲ್ಲಿ ಮಹಿಳಾ ಪತ್ರಕರ್ತೆಯ ಮೃತದೇಹವೊಂದು ಪತ್ತೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದ ‘ಘಾಜಿ ಟಿವಿ’ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾರಾ ರಹ್ನುಮಾ ಎಂಬ ಮಹಿಳಾ ಪತ್ರಕರ್ತೆ ಶವವಾಗಿ ಪತ್ತೆಯಾಗಿದ್ದಾರೆ.
ಘಾಜಿ ಚಾನೆಲ್ ಅನ್ನು ಕೈಗಾರಿಕೋದ್ಯಮಿ ಹಾಗೂ ಬಾಂಗ್ಲಾದೇಶದ ಜವಳಿ ಸಚಿವರಾಗಿರುವ ಗೋಲಂ ದಸ್ತಗೀರ್ ಘಾಜಿ ಅವರು ನಡೆಸುತ್ತಿದ್ದಾರೆ. ಅವರು ‘ಅವಾಮಿ ಲೀಗ್’ ಜೊತೆ ಸಂಬಂಧ ಹೊಂದಿದ್ದರು. 2024 ರಲ್ಲಿ, ಅವರು ಸತತ ನಾಲ್ಕನೇ ಬಾರಿಗೆ ನಾರಾಯಣಗಂಜ್ ಪ್ರದೇಶದಿಂದ ಸಂಸದರಾದರು. ಈಗ ಸರ್ಕಾರ ಬದಲಾದ ನಂತರ ಅವರನ್ನೂ ಬಂಧಿಸಲಾಗಿದೆ ಎನ್ನಲಾಗಿದೆ.
ಸಾರಾ ಸಾಯುವ ಮೊದಲು ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ಅದರಲ್ಲಿ ಫಹೀಮ್ ಫೈಸಲ್ ಎಂಬ ವ್ಯಕ್ತಿಯನ್ನು ಟ್ಯಾಗ್ ಮಾಡಿ ಅವರ ಸ್ನೇಹಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ ಮತ್ತು ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ನಾವು ಅನೇಕ ಯೋಜನೆಗಳನ್ನು ಹೊಂದಿದ್ದೇವೆ, ಆದರೆ ಆ ಯೋಜನೆಗಳನ್ನು ಪೂರೈಸಲು ಸಾಧ್ಯವಾಗದಿದ್ದಕ್ಕಾಗಿ ನನಗೆ ವಿಷಾದವಿದೆ ಎಂದು ಬರೆದಿದ್ದಾರೆ.

