ಅಮೆರಿಕದ ಅಧ್ಯಕ್ಷ ಸ್ಥಾನದ ರೇಸ್​ನಿಂದ ಹಾಲಿ ಪ್ರೆಸಿಡೆಂಟ್ ಆಗಿರುವ ಜೋ ಬೈಡೆನ್ ಅವರು ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.

ಹಾಲಿ ಅಧ್ಯಕ್ಷರಾಗಿರುವ ಜೋ ಬೈಡೆನ್ ಅವರಿಗೆ ಈಗಾಗಲೇ 81 ವರ್ಷಗಳು ಆಗಿವೆ. ಹೀಗಾಗಿ ಅನಾರೋಗ್ಯ, ವಯಸ್ಸಿನ ಕಾರಣದಿಂದ ಯುಎಸ್​ ಪ್ರೆಸಿಡೆಂಟ್​ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಬೈಡೆನ್‌ ಅವರು ಹಿಂದೆ ಸರಿದಿದ್ದು ನೂತನ ಅಧ್ಯಕ್ಷರನ್ನು ಸದ್ಯದಲ್ಲೇ ನೇಮಕ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಡೆಮಾಕ್ರಟಿಕ್ ಪಕ್ಷದಿಂದ ಬೇರೊಬ್ಬರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕಾಗಿದೆ. ಇದರಿಂದ ಡೆಮಾಕ್ರಟಿಕ್​ನಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಯಾರು ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಬೈಡನ್ ಅವರಿಗೆ ವಯಸ್ಸು ಆದ ಕಾರಣ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಅವರು ಹಿಂದೆ ಸರಿಯುವುದು ಉತ್ತಮ ಎಂದು ಹೇಳಿದ್ದಾರೆ.