News Karnataka Kannada
Sunday, May 12 2024
ವಿದೇಶ

ಟೋಕಿಯೋದಲ್ಲಿ ವಿಮಾನಗಳು ಪರಸ್ಪರ ಡಿಕ್ಕಿ: ಐವರ ಮೃತ್ಯು

ಜಪಾನ್ ರಾಜಧಾನಿಯ ಹನೇಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪಾನ್ ಏರ್ ಲೈನ್ ವಿಮಾನವೊಂದು ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ಐದು ಸಿಬ್ಬಂದಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Photo Credit : News Kannada

ಟೋಕಿಯೋ: ಜಪಾನ್ ರಾಜಧಾನಿಯ ಹನೇಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪಾನ್ ಏರ್ ಲೈನ್ ವಿಮಾನವೊಂದು ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ಐದು ಸಿಬ್ಬಂದಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಪಾನ್ ಏರ್ ಲೈನ್ಸ್ ನ ಏರ್ ಬಸ್ ಎ೩೫೦ ವಿಮಾನ ಲ್ಯಾಂಡ್ ಆಗುತ್ತಿದ್ದಾಗ ರನ್ ವೇನಲ್ಲಿದ್ದ ಕೋಸ್ಟ ಗಾರ್ಡ್ ವಿಮಾನಕ್ಕೆ ಡಿಕ್ಕಿಯಾಗಿದ್ದು, ಅದು ಕ್ಷಣಮಾತ್ರದಲ್ಲಿ ಹೊತ್ತಿ ಉರಿದಿದೆ. ೩೭೯ ಪ್ರಯಾಣಿಕರನ್ನು ಹೊತ್ತಿದ್ದ ಏರ್ ಬಸ್ ಎ೩೫೦ಗೂ ಬೆಂಕಿ ಹತ್ತಿತ್ತಾದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯ ವೇಳೆ ಅಗ್ನಿಶಾಮಕ ಪಡೆ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅದು ಫಲಿಸಲಿಲ್ಲ. ಇದರ ಬಗ್ಗೆ ತನಿಖೆ ನಡೆಯುತ್ತಿದ್ದು, ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು