ಸಿರಿಯಾ: ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿರುವ ಕಟ್ಟಡದ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಈ ಮಾಹಿತಿಯನ್ನು ನೀಡಿದೆ.
ಈ ಕಟ್ಟಡಕ್ಕೆ ಇರಾನ್ನ ರೆವಲ್ಯೂಷನರಿ ಗಾರ್ಡ್ ಮತ್ತು ಹಿಜ್ಬುಲ್ಲಾ ನಾಯಕರು ಆಗಾಗ ಭೇಟಿ ನೀಡುತ್ತಿರುತ್ತಿದ್ದರು. ಇಸ್ರೇಲ್ ಡಮಾಸ್ಕಸ್‌ನ ಪಶ್ಚಿಮದಲ್ಲಿರುವ ಮೆಜಾಹ್ ಉಪನಗರದಲ್ಲಿರುವ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡಿದೆ. ಈ ದಾಳಿಯನ್ನು ಇಸ್ರೇಲ್ ನಡೆಸಿದೆ. ವರದಿಯ ಪ್ರಕಾರ, ಇಸ್ರೇಲ್‌ನಿಂದ ಮೂರು ರಾಕೆಟ್‌ಗಳನ್ನು ಹಾರಿಸಲಾಯಿತು.

