ಬೈರೂತ್: ಲೆಬನಾನ್ ಹಾಗೂ ಇಸ್ರೇಲ್ ನಡುವಿನ ಹೊಸ ಕದನ ವಿರಾಮ ಏರ್ಪಟ್ಟ ಎರಡು ದಿನಗಳ ನಂತರ ದಕ್ಷಿಣ ಲೆಬನಾನ್‌ನ ಮೇಲೆ ಇಸ್ರೇಲ್ ವಾಯುಸೇನೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿದೆ. ಇದರಿಂದ ಲೆಬನಾನ್ ಸೇನೆಯ ಮೂವರು ಸೈನಿಕರು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಬತಿಯೆ ನಗರವನ್ನು ಮರ್ಜಯೊನ್ ಪಟ್ಟಣದೊಂದಿಗೆ ಸಂಪರ್ಕಿಸುವ ರಸ್ತೆಯನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಬ್ರಿಗೇಡಿಯರ್ ಜನರಲ್ ಸೇರಿದಂತೆ ಮೂವರು ಸೈನಿಕರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಟಿವಿ ವಾಹಿನಿಗಳು ವರದಿ ಮಾಡಿವೆ.

