ದಿಸ್ಪುರ್: ಪತಿ-ಪತ್ನಿಯರ ಸಂಬಂಧ ಎಲ್ಲದವುದಕ್ಕಿಂತ ಶ್ರೇಷ್ಠ ಸಂಬಂಧ. ಒಬ್ಬರಿಗೆ ಒಬ್ಬರರೂ ಅನ್ಯೋನ್ಯವಾಗಿ ಇರುವಂತದ್ದು. ಇಂತಹ ಸಂಬಂಧಕ್ಕೆ ಉದಾಹರಣೆ ಆಸ್ಪತ್ರೆಯಲ್ಲಿ ಕ್ಯಾನ್ಸರ್ನಿಂದ ತನ್ನ ಹೆಂಡತಿ ಸಾವನ್ನಪ್ಪಿದ ಕೆಲವೇ ಕ್ಷಣದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಶೂಟ್ ಮಾಡಿಕೊಂಡು ಅದೆ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಸಾಂನ ಗುವಾಹಟಿ ನಗರದಲ್ಲಿರುವ ನೆಮ್‌ಕೇರ್ ಎನ್ನುವ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಪ್ರಸ್ತುತ ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಹಾಗೂ 2009ರ ಬ್ಯಾಚ್‌ನ ಡಿಐಜಿ ಶ್ರೇಣಿಯ ಐಪಿಎಸ್ ಅಧಿಕಾರಿ ಶಿಲಾದಿತ್ಯ ಚೇಟಿಯಾ (44) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತ್ನಿ ಆಗಮೊನೀ ಬಾರ್ಬರುವಾ ಕಳೆದ 2 ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು.ಹೀಗಾಗಿ ಇವರನ್ನು ನೆಮ್‌ಕೇರ್ ಖಾಸಗಿ ಆಸ್ಪತ್ರೆಗೆ ಎರಡು ತಿಂಗಳು ಹಿಂದೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

