News Karnataka Kannada
Wednesday, May 01 2024
ವಿದೇಶ

ಸಿಂಗಾಪುರ ಅಧ್ಯಕ್ಷರಾಗಿ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ ಆಯ್ಕೆ

Indian-origin Tharman Shanmugaratnam elected Singapore's president
Photo Credit : News Kannada

ಸಿಂಗಾಪುರ: ಭಾರತೀಯ ಮೂಲದ ಸಿಂಗಾಪುರದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಅವರು ಶುಕ್ರವಾರ ಸಿಂಗಾಪುರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಷಣ್ಮುಗರತ್ನಂ ಅವರು, ಚೀನಾ ಮೂಲದ ಇಬ್ಬರು ಪ್ರತಿಸ್ಪರ್ಧಿಗಳನ್ನು ಸೋಲಿಸಿ, ಸಿಂಗಾಪುರದ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

66 ವರ್ಷ ವಯಸ್ಸಿನ ನಾಯಕನನ್ನು ಆಯ್ಕೆ ಮಾಡಲು 2.7 ದಶಲಕ್ಷಕ್ಕೂ ಹೆಚ್ಚು ಸಿಂಗಾಪುರದವರು ಮತ ಚಲಾಯಿಸಿದ್ದು.ಸಿಂಗಾಪುರದ ಅಧ್ಯಕ್ಷರು ಸರ್ಕಾರದ ಬಜೆಟ್‌ ಮತ್ತು ಪ್ರಮುಖ ಸಾರ್ವಜನಿಕ ನೇಮಕಾತಿ, ಭ್ರಷ್ಟಾಚಾರ-ವಿರೋಧಿ ತನಿಖೆ ಅಧಿಕಾರ ಹೊಂದಿದ್ದಾರೆ. ಥರ್ಮನ್ 2001 ರಲ್ಲಿ ರಾಜಕೀಯಕ್ಕೆ ಸೇರಿದ್ದು, ಎರಡು ದಶಕಗಳಿಂದ ಸಿಂಗಾಪುರದ ಆಡಳಿತಾರೂಢ ಪೀಪಲ್ಸ್ ಆಕ್ಷನ್ ಪಾರ್ಟಿಯ (ಪಿಎಪಿ)ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಷಣ್ಮುಗರತ್ನಂ ಅವರು ಶೇ. 70.4 ರಷ್ಟು ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿಗಳಾದ ಎನ್‌ಜಿ ಕೊಕ್ ಸಾಂಗ್ ಮತ್ತು ತಾನ್ ಕಿನ್ ಲಿಯಾನ್ ಅವರು ಕ್ರಮವಾಗಿ ಶೇಕಡಾ 15.7 ಮತ್ತು 13.88 ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಅಧ್ಯಕ್ಷ ಹುದ್ದೆಯ ರೇಸ್‌ ನಲ್ಲಿ ಸಿಂಗಾಪುರ್‌ ಇನ್ವೆಸ್ಟ್‌ಮೆಂಟ್‌ ಕಾರ್ಪ್‌ನ ಮಾಜಿ ಮುಖ್ಯ ಹೂಡಿಕೆ ಅಧಿಕಾರಿ ಎನ್‌ಜಿ ಕೊಕ್‌ ಸಾಂಗ್‌, ಸರ್ಕಾರಿ ಸ್ವಾಮ್ಯದ ಒಕ್ಕೂಟ ಆಧಾರಿತ ವಿಮಾ ಸಂಸ್ಥೆ ಎನ್‌ಟಿಯುಸಿಯ ಮುಖ್ಯಸ್ಥ ಟಾನ್‌ ಕಿನ್‌ ಲಿಯಾನ್‌ ಇದ್ದರು. ಹಾಲಿ ಅಧ್ಯಕ್ಷ ಹಲಿಮಾ ಯಾಕುಬ್‌ ಅವರ ಆರು ವರ್ಷಗಳ ಅಧಿಕಾರಾವಧಿ ಸೆ.13ರಂದು ಕೊನೆಗೊಳ್ಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು