ಅಮೇರಿಕ: ಭಾರತೀಯ ಮೂಲದ ವೈದ್ಯರನ್ನು ಅಲಬಾಮಾದ ಟಸ್ಕಲೂಸಾ ನಗರದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ಡಾ ರಮೇಶ್ ಬಾಬು ಪೆರಮಶೆಟ್ಟಿ ಎಂದು ಗುರುತಿಸಲಾಗಿದೆ.

ಇವರು ಅಮೆರಿಕದಲ್ಲಿ ಪ್ರಸಿದ್ಧ ವೈದ್ಯರಾಗಿದ್ದು, ಹಲವಾರು ಆಸ್ಪತ್ರೆಗಳನ್ನು ನಿರ್ವಹಿಸುತ್ತಿದ್ದರು. ವೈದ್ಯ ರಮೇಶ್ ಆಂಧ್ರಪ್ರದೇಶದ ತಿರುಪತಿ ಮೂಲದವರಾಗಿದ್ದಾರೆ. ರಮೇಶ್‌ ಕ್ರಿಮ್ಸನ್ ನೆಟ್‌ವರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ವೈದ್ಯಕೀಯ ಅಧಿಕಾರಿಗಳ ಗುಂಪಿನ ನಿರ್ದೇಶಕರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಡಾ ಪೆರಮಶೆಟ್ಟಿ 1986 ರಲ್ಲಿ ವಿಸ್ಕಾನ್ಸಿನ್‌ನ ವೈದ್ಯಕೀಯ ಕಾಲೇಜಿನ ಹಾಗೂ ಶ್ರೀ ವೆಂಕಟೇಶ್ವರ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದರು. ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ 38 ವರ್ಷಗಳ ಅನುಭವವಿತ್ತು. ಅವರು ಅಮೇರಿಕದ ಟಸ್ಕಲೂಸಾ ಮತ್ತು ಇತರ ನಾಲ್ಕು ಪ್ರದೇಶಗಳಲ್ಲಿ ಕೆಲಸ ಮಾಡಿದ್ದರು.

ಇವರು ಡಿಪ್ಲೊಮಾ ಇನ್ ಚೈಲ್ಡ್ ಹೆಲ್ತ್ (DCH) ಪ್ರಾದೇಶಿಕ ವೈದ್ಯಕೀಯ ಕೇಂದ್ರದೊಂದಿಗೆ ಸಹ ಸಂಯೋಜಿತರಾಗಿದ್ದರು. ಇವರು ತಮ್ಮ ವೃತ್ತಿಯಲ್ಲಿ ಹೆಚ್ಚು ಹೆಸರು ಮಾಡಿದ್ದು, ಟಸ್ಕಲೂಸಾದ ಬೀದಿಗೆ ಅವರ ಹೆಸರನ್ನು ಇಡಲಾಗಿದೆ.