ಢಾಕಾ : ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರಿಗೆ ಮೀಸಲಾತಿ ಕೊಡುವ ಸಂಬಂಧ ಉದ್ಭವಿಸಿದ ಹಿಂಸಾಚಾರ ವಾರಗಳೇ ಆದರೂ ಕಡಿಮೆ ಆಗಿಲ್ಲ. ಇದೀಗ ಬಾಂಗ್ಲಾದೇಶದಲ್ಲಿ ರಾಷ್ಟ್ರವ್ಯಾಪಿ ಕಟ್ಟುನಿಟ್ಟಿನ ನಿಷೇಧಾಜ್ಞೆ (ಕರ್ಫ್ಯೂ) ಜಾರಿ ಮಾಡಲಾಗಿದೆ. ಗಲಭೆ ಮಾಡುವವರ ವಿರುದ್ಧ ಶೂಟ್ ಅಟ್ ಸೈಟ್ (ಕಂಡಲ್ಲಿ ಗುಂಡು ಹೊಡೆಯುವ) ಆದೇಶ ನೀಡಲಾಗಿದೆ.

ದೇಶದ ವಿವಿಧೆಡೆ ಸೈನಿಕರನ್ನು ನಿಯೋಜಿಸಿ ಭದ್ರತೆ ಬಿಗಿಗೊಳಿಸಲಾಗಿದೆ. ಇಂದು ಇಲ್ಲಿನ ಸರ್ವೋಚ್ಚ ನ್ಯಾಯಾಲಯ ಈ ಮೀಸಲಾತಿ ಪ್ರಕರಣದಲ್ಲಿ ತೀರ್ಪು ನೀಡಲಿದ್ದು, ಇನ್ನಷ್ಟು ಹೆಚ್ಚಿನ ಜಾಗ್ರತೆ ವಹಿಸಿ ಭದ್ರತೆ ಬಿಗಿಗೊಳಿಸಲಾಗಿದೆ.