ಕೆನಡಾ: ಕೆನಡಾದಲ್ಲಿ ಮತ್ತೆ ಹಿಂದೂ ದೇಗುಲದ ಮೇಲೆ ಕಿಡಿಗೇಡಿಗಳು ಕೆಟ್ಟ ಕಣ್ಣು ಬೀರಿದ್ದಾರೆ. ದೇಗುಲದ ಗೋಡೆ ಮೇಲೆ ಗ್ರಾಫಿಟಿ ಫೈಂಟಿಂಗ್‌ನಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯಗೆ ಬೆದರಿಕೆವೊಡ್ಡಿ ಬರೆದಿರುವ ಬರಹಗಳನ್ನು ಕಾಣಬಹುದಾಗಿದೆ. ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಚಂದ್ರ ಆರ್ಯ ಪೋಸ್ಟ್‌ವೊಂದನ್ನು ಮಾಡಿದ್ದು, ಎಡ್ಮಂಟನ್‌ನಲ್ಲಿರುವ ಹಿಂದೂ ದೇವಾಲಯ BAPS ಸ್ವಾಮಿನಾರಾಯಣ ಮಂದಿರವನ್ನು ಮತ್ತೆ ಧ್ವಂಸಗೊಳಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಗ್ರೇಟರ್ ಟೊರೊಂಟೊ ಪ್ರದೇಶ, ಬ್ರಿಟಿಷ್ ಕೊಲಂಬಿಯಾ ಮತ್ತು ಕೆನಡಾದ ಇತರ ಸ್ಥಳಗಳಲ್ಲಿ ಹಿಂದೂ ದೇವಾಲಯಗಳನ್ನು ದ್ವೇಷಪೂರಿತ ಗೀಚುಬರಹದಿಂದ ಧ್ವಂಸಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.