ಇಸ್ಲಾಮಾಬಾದ್ : ನರೆಯ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಏರಿಕೆ ಕಂಡಿದೆ. ಇದೀಗ ಪಾಕಿಸ್ತಾನದಲ್ಲಿ 38 ಲಕ್ಷ ಜನಸಂಖ್ಯೆಯೊಂದಿಗೆ ಹಿಂದೂ ಧರ್ಮ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿ ಹೊರಹೊಮ್ಮಿದೆ.
ಕಳೆದ ವರ್ಷದ ಜಾತಿ ಗಣತಿ ಆಧಾರದ ಮೇಲೆ ಪಾಕಿಸ್ತಾನ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್( ಪಿಬಿಎಸ್) ವರದಿ ಪ್ರಕಟಿಸಿದೆ. ಅದರನ್ವಯ ಪಾಕಿಸ್ತಾನದ ಒಟ್ಟು ಜನಸಂಖ್ಯೆ 24.45 ಕೋಟಿ. ಇನ್ನು 2017ರಲ್ಲಿ 35 ಲಕ್ಷದಷ್ಟಿದ್ದ ಹಿಂದೂಗಳ ಸಂಖ್ಯೆ 2023ರಲ್ಲಿ 38 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಒಟ್ಟಾರೆಯಾಗಿ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ.1.73 ರಷ್ಟಿಂದ ಶೇ.1.61ರಷ್ಟಕ್ಕೆ ಕುಸಿದಿದೆ.

