Bengaluru 27°C
Ad

ಪಾಕ್‌ನಲ್ಲಿ ಹಿಂದೂ ಬಾಲಕಿಯ ಅಪಹರಿಸಿ ಇಸ್ಲಾಂಗೆ ಮತಾಂತರ

ಪಾಕಿಸ್ತಾನದ ಕರಾಚಿ ಪ್ರದೇಶದಿಂದ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಆಕೆಯನ್ನು ಬಲವಂತವಾಗಿ ಮದುವೆಯಾದ ಆಘಾತಕಾರಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಪಾಕಿಸ್ತಾನದ ಕರಾಚಿ ಪ್ರದೇಶದಿಂದ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಆಕೆಯನ್ನು ಬಲವಂತವಾಗಿ ಮದುವೆಯಾದ ಆಘಾತಕಾರಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

16 ವರ್ಷದ ಹುಡುಗಿಯನ್ನು ಪಾಕಿಸ್ತಾನದ ಶಹದಾಬ್ಕೋಟ್ ಪಟ್ಟಣದ ನಿವಾಸಿ ಗುಲ್ ಹಸನ್ ಅವರ ಪುತ್ರ ಸಮೀರ್ ಅಲಿ ಎಂಬಾತ ಅಪಹರಿಸಿ ಮುಸ್ಲಿಂಧರ್ಮಕ್ಕೆ ಮತಾಂತರಿಸಿ ನಂತರ ಬಲವಂತವಾಗಿ ಮದುವೆಯಾದ ಎಂದು ಆರೋಪಿಸಲಾಗಿದೆ.

ಸಂಗೀತಾ ಎಂಬ ಬಾಲಕಿಯನ್ನು ಸಮೀರ್ ಅಲಿ ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಆಕೆಯನ್ನು ಬಲವಂತವಾಗಿ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ಮತಾಂತರದ ನಂತರ ಆಕೆಗೆ ಹಮೀದಾ ಎಂಬ ಹೊಸ ಹೆಸರನ್ನು ನೀಡಿದ್ದಾರೆ. ಆಕೆಗೆ 15 ವರ್ಷ ವಯಸ್ಸಾಗಿದ್ದರೂ ಕೂಡ ಆರೋಪಿ ಆಕೆಯ ದಾಖಲೆಗಳನ್ನು ಪೋರ್ಜರಿ ಮಾಡಿ ಆಕೆ 19 ವರ್ಷದ ವಯಸ್ಕಳು ಎಂದು ಬಿಂಬಿಸಿ ಆಕೆ ತನ್ನನ್ನು ಮದುವೆಯಾಗಲು ಸಿದ್ಧಳಿದ್ದಾಳೆ ಎಂಬುದಾಗಿ ನಿರೂಪಿಸಿದ್ದಾನೆ.

ಅದಕ್ಕಾಗಿ ಆರೋಪಿಯು ಹುಡುಗಿಗೆ ತಾನು ವಯಸ್ಕಳು ಹಾಗೂ ತನ್ನ ಇಚ್ಛೆಯಂತೆ ಪ್ರೀತಿಯಿಂದ ಆರೋಪಿಯನ್ನು ಮದುವೆಯಾಗುತ್ತಿರುವೆ ಎಂದು ಅಫಿಡವಿಟ್‌ಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾನೆ. ಮತ್ತು ಆರೋಪಿಯ ವಿರುದ್ಧ ಯಾರಾದರೂ ಪೊಲೀಸರಿಗೆ ದೂರು ನೀಡಿದರೆ ಸಂತ್ರಸ್ತೆ ಇಚ್ಛೆಯಂತೆ ಮದುವೆಯಾಗುತ್ತಿರುವುದು ಎಂದು ತೋರಿಸಲು ಈ ತಯಾರಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

 

Ad
Ad
Nk Channel Final 21 09 2023
Ad